ಜನನೇಂದ್ರೀಯ ಛೇದನ ವಿರೋಧಿಸಿ ಬೊಹ್ರ ಮುಸ್ಲಿಂ ಮಹಿಳೆಯರ ಅಭಿಯಾನ

ಮುಂಬೈ,ಡಿ. 11: ದಾವೂದಿ ಬೊಹ್ರ ಮುಸ್ಲಿಂ ಸಮುದಾಯದ ಮಹಿಳೆಯರ ನಡುವೆ ಆಚಾರದಲ್ಲಿರುವ ಜನನೇಂದ್ರೀಯ ಛೇದನ ಆಚಾರದ ವಿರುದ್ಧ ಭಾರೀಪ್ರಚಾರ ಆರಂಭಗೊಂಡಿದೆ ಎಂದು ವರದಿಯಾಗಿದೆ.
ದಾವೂದಿ ಬೊಹ್ರ ಸಮುದಾಯದ ಮಹಿಳೆಯರೇ ಪ್ರಚಾರದ ನೇತೃತ್ವವನ್ನು ವಹಿಸಿದ್ದಾರೆ. ಚೇಂಜ್ ಆರ್ಗ್ ವೆಬ್ಬಿಲ್ ಆನ್‌ಲೈನ್ ದೂರುಗಳಲ್ಲಿ ಸಹಿಹಾಕುವುದು ಅವರು ವಿರೋಧಿ ಪ್ರಚಾರಕ್ಕೆ ಆಯ್ದು ಕೊಂಡ ರೀತಿಯಾಗಿದೆ. ಈ ಆಚಾರದ ವಿರುದ್ಧ ಪ್ರತಿಕ್ರಿಯಿಸುವವರ ವಿಫುಲವಾದ ಪ್ರತಿರೋಧ ವ್ಯಕ್ತವಾಗಿದ್ದರಿಂದ ಬೊಹ್ರ ಮಹಿಳೆಯರು ರಂಗಪ್ರವೇಶಿಸಿದ್ದಾರೆ.
ವಿಶ್ವಸಂಸ್ಥೆಯ ಅಡಿಯಲಿ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಕೆಲಸಮಾಡುವ ವಿಭಾಗಕ್ಕೆ ದೂರು ಸಲ್ಲಿಸಲಾಗುತ್ತದೆ. ಇದೇ ವಿಭಾಗ ಕಳೆದವರ್ಷ ಡಿಸೆಂಬರ್‌ನಲ್ಲಿ ಇಂತಹ ಪ್ರಚಾರವನ್ನು ಆರಂಭಿಸಿತ್ತು. ಆಸಮಯದಲ್ಲಿಎಂಬತ್ತು ಸಾವಿರದಷ್ಟು ಮಂದಿ ಇದನ್ನು ಬೆಂಬಲಿಸಿದ್ದರು.
1400 ವರ್ಷಗಳಿಂದ ಮುಂದುವರಿಯುತ್ತಿರುವ ಹೀನವಾದ ಈ ಆಚಾರದ ವಿರುದ್ಧ ಪ್ರತಿಕ್ರಯಿಸಲಿಕ್ಕಾಗಿ ಪ್ರಚಾರ ನಡೆಸಲಾಗುತ್ತಿದೆ ಎಂದು ದಾವೂದಿ ಬೊಹ್ರ ಮುಸ್ಲಿಂ ಮಹಿಳೆಯರ ನಾಯಕಿ ಮಸೂಮ ರನಲ್ವಿ ಹೇಳಿದ್ದಾರೆ. ಯುನಿವರ್ಸಿಟಿ ವಿಮೆನ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪೂನವಾಲ ಎಂಬವರು ಈ ಪ್ರಚಾರವನ್ನು ಬೆಂಬಲಿಸಿದ್ದಾರೆಂದು ವರದಿ ತಿಳಿಸಿದೆ.







