ಸಂಘಟಿತರಾದಾಗ ಯಶಸ್ಸು ಸಾಧ್ಯ: ಪೌಲಿನ್ ಸಲ್ದಾನ

ಮಂಗಳೂರು, ಡಿ.11: ಸಂಘಟಿತರಾಗಿ ಮುನ್ನಡೆದಾಗ ಯಶಸ್ವಿ ಸಾಧ್ಯ. ಒಗ್ಗಟ್ಟಿನಲ್ಲಿ ಬಲವಿದೆ ಎಂದು ಮಂಗಳೂರು ಲೇಡಿಸ್ ಬ್ಯೂಟಿ ಅಸೋಸಿಯೇಶನ್ ಅಧ್ಯಕ್ಷೆ ಪೌಲಿನ್ ಸಲ್ದಾನ ಹೇಳಿದರು.
ಸುರತ್ಕಲ್‌ನಲ್ಲಿ ಜರಗಿದ ಲೇಡಿಸ್ ಬ್ಯೂಟಿ ಅಸೋಸಿಯೇಶನ್ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.
ಸುರತ್ಕಲ್, ಬಜಪೆ, ಕಿನ್ನಿಗೋಳಿ, ಮುಲ್ಕಿಯವರೆಗಿನ ಎಲ್ಲ ಪಾರ್ಲರ್‌ನ ಮಾಲಕಿಯರಿಗೆ ಸಂಘದ ನೀತಿ ನಿಯಮಗಳು, ಗ್ರಾಹಕರಿಗೆ ಕೊಡುವ ಸೇವೆಗಳು ಹಾಗೂ ಸ್ವಚ್ಚತೆಯ ಬಗ್ಗೆ ಸಂಘದ ಧ್ಯೇಯಗಳ ಬಗ್ಗೆ ವಿವರಿಸಿದರು.
ಸಂಘದ ಉಪಾಧ್ಯಕ್ಷೆ ಶಾರದಾ ಸುರೇಶ್, ಪ್ರಧಾನ ಕಾರ್ಯದರ್ಶಿ ಅನಿತಾ ಅಮೀನ್, ಉಪ ಕಾರ್ಯದರ್ಶಿ ರಮ್ಯಾ ಪಿ.ಡಿ., ಪ್ರಧಾನ ಖಜಾಂಚಿ ವಿನ್ನಿ ಪಿಂಟೊ, ಉಪ ಖಜಾಂಚಿ ಪ್ರಿಯಾ ವೈ. ಎಸ್., ಸದಸ್ಯೆ ಬಬಿತಾ ಶೆಟ್ಟಿ ಉಪಸ್ಥಿತರಿದ್ದರು.
ಸದಸ್ಯೆ ಮಮತಾ ಕಾರ್ಯಕ್ರಮ ನಿರೂಪಿಸಿದರು.
Next Story





