ತಮಿಳುನಾಡು, ಆಂಧ್ರಕ್ಕೆ ‘ವರ್ಧಾ ’ಚಂಡಮಾರುತದ ಭೀತಿ

ಚೆನ್ನೈ, ಡಿ.11: ತಮಿಳುನಾಡು ಮತ್ತು ಆಂಧ್ರ ಪ್ರದೇಶಕ್ಕೆ ಮತ್ತೆ ಚಂಡಮಾರುತದ ಭೀತಿ ಎದುರಾಗಿದ್ದು, ಸೋಮವಾರ ಮಧ್ಯಾಹ್ನ ತಮಿಳುನಾಡು ಮತ್ತು ಆಂಧ್ರ ಕರಾವಳಿಗೆ ಚಂಡಮಾರುತ ‘ವರ್ಧಾ’ ಅಪ್ಪಳಿಸಲಿದೆ.
ಬಂಗಾಳಕೊಲ್ಲಿಯಿಂದ 100 ಕಿ.ಮೀ ವೇಗದಲ್ಲಿ ಚಂಡಮಾರುತದ ಗಾಳಿ ಬೀಸಲಿದ್ದು, ಚೆನ್ನೈ, ನೆಲ್ಲೂರು, ನಡುವೆ ಚಂಡಮಾರುತ ವರ್ಧಾ ಅಪ್ಪಳಿಸಲಿದೆ. ಇದರ ಪರಿಣಾಮವಾಗಿ ಚೆನ್ನೈನಲ್ಲಿ ನಾಳೆ ಬೆಳಗ್ಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಚೆನ್ನೈ, ಕಾಂಚಿಪುರ, ತಿರುವಳ್ಳೂರು ಹಾಗೂ ಪುದುಚೇರಿಯಲ್ಲಿ ನಾಳೆ ಶಾಲಾ ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿದೆ.
Next Story





