Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಭಯೋತ್ಪಾದನೆ ಆರೋಪದಲ್ಲಿ ತಪ್ಪಾಗಿ...

ಭಯೋತ್ಪಾದನೆ ಆರೋಪದಲ್ಲಿ ತಪ್ಪಾಗಿ ಸಿಲುಕಿಸಲ್ಪಟ್ಟವರಿಗೆ ಪರಿಹಾರ ನೀಡಬೇಕು: ನ್ಯಾ. ಶಾ ನೇತೃತ್ವದ ಸಮಿತಿ

ವಾರ್ತಾಭಾರತಿವಾರ್ತಾಭಾರತಿ11 Dec 2016 10:08 PM IST
share
ಭಯೋತ್ಪಾದನೆ ಆರೋಪದಲ್ಲಿ ತಪ್ಪಾಗಿ ಸಿಲುಕಿಸಲ್ಪಟ್ಟವರಿಗೆ ಪರಿಹಾರ ನೀಡಬೇಕು: ನ್ಯಾ. ಶಾ ನೇತೃತ್ವದ ಸಮಿತಿ

ಹೊಸದಿಲ್ಲಿ, ಡಿ.11: ನ್ಯಾಯಾಲಯವು ಅಧಿಕೃತ ಘೋಷಣೆ ಮಾಡುವವರೆಗೆ ಮಾಧ್ಯಮಗಳು ಭಯೋತ್ಪಾದನಾ ಆರೋಪಿಗಳನ್ನು ‘ಅಪರಾಧಿಗಳು’ ಎಂದು ಘೋಷಿಸಬಾರದು. ಸರಕಾರದ ತಪ್ಪು ಕ್ರಮದ ಸಂತ್ರಸ್ತರಿಗೆ ಪರಿಹಾರ ನೀಡಲು ಸರಕಾರವು ಹಕ್ಕುಗಳ ಆಧಾರದ ಕ್ರಮವೊಂದನ್ನು ಸರಕಾರ ಅಳವಡಿಸಿಕೊಳ್ಳಬೇಕೆಂದು ಭಾರತದ ಕಾನೂನು ಆಯೋಗದ ಮಾಜಿ ಅಧ್ಯಕ್ಷ ನ್ಯಾ.ಎ.ಪಿ.ಶಾ ನೇತೃತ್ವದ ಸಮಿತಿಯೊಂದು ಡಿ.10ರಂದು ದಿಲ್ಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದೆ.

ಭಯೋತ್ಪಾದನೆ ಪ್ರಕರಣಗಳಲ್ಲಿ ದೋಷಮುಕ್ತರಾದ ಅಮಾಯಕರ ಬಗ್ಗೆ ಜನರ ನ್ಯಾಯಾಧಿಕರಣದ ಆಧಾರಿತ ಸಮಿತಿಯ ವರದಿಯನ್ನು ಬಿಡುಗಡೆಗೊಳಿಸಿ ನ್ಯಾ.ಶಾ ಮಾತನಾಡುತ್ತಿದ್ದರು. ಸಮೀಕ್ಷೆಯನ್ನು ಅಕ್ಟೋಬರ್‌ನಲ್ಲಿ ನಡೆಸಲಾಗಿತ್ತು.

ದೋಷಮುಕ್ತ ಅಮಾಯಕರ ಕುರಿತ ಮೊದಲ ಜನರ ನ್ಯಾಯಾಧಿಕರಣದ ವರದಿ

ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಭಾರತದ 20ನೆ ಕಾನೂನು ಆಯೋಗದ ಅಧ್ಯಕ್ಷರಾಗಿದ್ದ ಎ.ಪಿ.ಶಾ ನೇತೃತ್ವದ ಈ ಸಮಿತಿಯಲ್ಲಿ ಖ್ಯಾತ ಚಿತ್ರನಿರ್ಮಾಪಕ ಸಯೀದ್ ಅಕ್ಬರ್ ಮಿರ್ಝಾ, ಎನ್‌ಎಲ್‌ಯು ದಿಲ್ಲಿ ರಿಜಿಸ್ಟ್ರಾರ್ ಜಿ.ಎಸ್.ಬಾಜಪೇಯಿ, ಖ್ಯಾತ ಪತ್ರಕರ್ತೆ ನೀನಾ ವ್ಯಾಸ್, ದಿಲ್ಲಿ ಸ್ಕೂಲ್ ಅಕಾಡಮಿಕ್ ನಂದಿನಿ ಸುಂದರ್, ಟಿಐಎಸ್‌ಎಸ್ ಉಪನಿರ್ದೇಶಕ ಅಬ್ದುಲ್ ಶಾಬಾಸ್, ಪತ್ರಕರ್ತ ವಿನೋದ್ ಶರ್ಮಾ ಹಾಗೂ ವಕೀಲೆ ಮೋನಿಕಾ ಸಕ್ರಾನಿ ಸದಸ್ಯರಾಗಿದ್ದರು.

ದ್ರವ್ಯ ರೂಪದ ಹಾಗೂ ದ್ರವ್ಯ ರೂಪದ್ದಲ್ಲದ ಎರಡೂ ನಷ್ಟಗಳನ್ನು ಪರಿಗಣಿಸಿ ಪ್ರಕರಣದಿಂದ ಪ್ರಕರಣದ ನೆಲೆಯಲ್ಲಿ ಪರಿಹಾರದ ಮೊತ್ತವನ್ನು ನಿಗದಿಪಡಿಸಬೇಕೆಂದು ಸಮಿತಿಯು ವರದಿಯಲ್ಲಿ ಹೇಳಿದೆ.

2016ರ ಅ.2ರಂದು ಇನೊಸೆಂಟ್ ನೆಟವರ್ಕ್ ಇಂಡಿಯಾ, ಭಯೋತ್ಪಾದನೆ ಪ್ರಕರಣಗಳಲ್ಲಿ ಖುಲಾಸೆಗೊಂಡ ಅಮಾಯಕರ ಕುರಿತು ಮೊದಲ ಜನತಾ ನ್ಯಾಯಾಧಿಕರಣವನ್ನು ಸಂಘಟಿಸಿತ್ತು. ದೇಶಾದ್ಯಂತ 15 ಮಂದಿ ಅಮಾಯಕರು ಸಮಿತಿಯ ಮುಂದೆ ಹೇಳೀಕೆ ನೀಡಿದ್ದರು.

ಭಯೋತ್ಪಾದನೆಯ ಪ್ರಕರಣಗಳ ನಿಭಾವಣೆಯಲ್ಲಿ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಎಲ್ಲ ವೈಫಲ್ಯವನ್ನು ಅ.2ರಂದು ನಡೆದಿದ್ದ ಹೇಳಿಕೆ ದಾಖಲೆ ವಿವರವಾಗಿ ಸ್ಪಷ್ಟಪಡಿಸಿತ್ತು. ತಪ್ಪು ದೋಷಾರೋಪಕ್ಕಾಗಿ ಸಂತ್ರಸ್ತರಿಗೆ ಸರಕಾರವು ಪರಿಹಾರ ನೀಡಬೇಕಾದ ಅಗತ್ಯವನ್ನು ಗುರುತಿಸಿದ ಸಮಿತಿ, ಬಂಧನ ಹಾಗೂ ಖುಲಾಸೆಗಳ ಸಂಪೂರ್ಣ ಪ್ರಕ್ರಿಯೆಯಲ್ಲಿ ಒಳಗೊಂಡಿದ್ದ ವಿವಿಧ ಪಾಲುದಾರರನ್ನು ಗುರುತಿಸಿದೆಯೆಂದು ವರದಿ ತಿಳಿಸಿದೆ.

ತಪ್ಪು ಕಾನೂನು ಕ್ರಮ ಕೇವಲ ತಾಂತ್ರಿಕ ತಪ್ಪಿ ಅಥವಾ ತನಿಖೆಯಲ್ಲಿ ನಿಜವಾದ ಮಾನವ ಪ್ರಮಾದದಿಂದ ಸಂಭವಿಸುವುದಲ್ಲ. ಆದರೆ, ಪ್ರಜ್ಞಾಪೂರ್ವಕ ಹಾಗು ದುರುದ್ದೇಶದ ತನಿಖೆ ಹಾಗೂ ಕಾನೂನು ಕ್ರಮದಿಂದ ಸಂಭವಿಸುತ್ತದೆ. ಒಂದು ಬಾಂಬ್ ಸ್ಫೋಟ ಅಥವಾ ದಾಳಿ ನಡೆದ ಬಳಿಕ ಮುಸ್ಲಿಂ ಯುವಕರನ್ನು ಸುತ್ತುವರಿದು ಬಂಧಿಸುವುದು ಪೊಲೀಸರು ಹಾಗೂ ತನಿಖೆ ಸಂಸ್ಥೆಗಳಿಗೆ ಮಾಮೂಲಾಗಿರುವಂತೆ ಕಂಡು ಬರುತ್ತಿದೆ. 2006ರ ಮಾಲೆಗಾಂವ್ ಸ್ಫೋಟದ ತನಿಖೆ ಮಾಡಲಾದ ವಿಧಾನ ಇದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಮುಸ್ಲಿಂ ಸಮುದಾಯದ ಯುವಕರನ್ನು ಬಂಧಿಸಲಾಯಿತು. ಅವರಿಗೆ ಸಿಮಿ ಕಾರ್ಯಕರ್ತರೆಂಬ ಹಣೆಪಟ್ಟಿ ಅಂಟಿಸಲಾಯಿತು ಹಾಗೂ ಪ್ರಮುಖ ಶಂಕಿತರೆಂದು ತೋರಿಸಲಾಯಿತು. ಆದರೆ, ಘಟನೆ ನಡೆದಾಗ ಕನಿಷ್ಠ ಅವರಲ್ಲೊಬ್ಬ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದನು ಹಾಗೂ ಇನ್ನೊಬ್ಬ ಪ್ರಮುಖ ಆರೋಪಿ ನೂರಾರು ಕಿ.ಮೀ. ದೂರದ ಯಾವತ್ಮಲ್‌ನಲ್ಲಿ ಅದೇ ದಿನ ಶಬ್-ಎ-ಬರಾತ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದನೆಂಬ ಸತ್ಯವನ್ನು ಮರೆಯಲಾಗಿತ್ತೆಂದು ಅದು ಹೇಳಿದೆ.

ಭಯೋತ್ಪಾದನೆ ವಿರೋಧಿ ಕಾನೂನು ವ್ಯಾಪ್ತಿಯಲ್ಲಿ ತನಿಖೆ ಸಂಸ್ಥೆಗಳಿಗೆ ನೀಡಲಾಗಿರುವ ಅತಿಯಾದ ಅಧಿಕಾರವನ್ನು ಹೇಳಿಕೆಗಳು ಬೆತ್ತಲೆಗೊಳಿಸಿವೆ. ಈ ಕಾನೂನುಗಳು ನಿಧರಿತ ಕಾನೂನುರಹಿತ ಸ್ವರೂಪ ಪಡೆದಿರುವುದನ್ನು ಹಾಗೂ ಭಯೋತ್ಪಾದನೆಯ ಆರೋಪದಲ್ಲಿ ಹತ್ತು ಹಲವು ಯುವಕರನ್ನು ತಪ್ಪಾಗಿ ಸಿಲುಕಿಸುವಲ್ಲಿ ಫಲ ಕಂಡುದನ್ನು ಸಮಿತಿಯು ಗಮನಿಸಿದೆಯೆಂದು ವರದಿ ತಿಳಿಸಿದೆ.

ಸಲಹೆಗಳು

ಪರಿಹಾರ: ಸರಕಾರದ ತಪ್ಪು ಕ್ರಮದಿಂದ ಸಂತಸ್ತ್ರರಾದವರಿಗೆ ಪರಿಹಾರ ನೀಡಲು ಸರಕಾರವು ಹಕ್ಕು ಆಧಾರಿತ ಕ್ರಮವೊಂದನ್ನು ಅಳವಡಿಸಿಕೊಳ್ಳಬೇಕು. ಸಂತ್ರಸ್ತರಿಗಾದ ದ್ರವ್ಯರೂಪದ ಹಾಗೂ ದ್ರವ್ಯರೂಪವಲ್ಲದ ನಷ್ಟಗಳನ್ನು ಪರಿಗಣಿಸಿ ಪ್ರಕರಣದಿಂದ ಪ್ರಕರಣದ ಆಧಾರದಲ್ಲಿ ಪರಿಹಾರದ ಮೊತ್ತವನ್ನು ನಿರ್ಧರಿಸಬೇಕು.

ಉತ್ತರದಾಯಿತ್ವ: ಅಂತಹ ಪ್ರಕರಣಗಳಲ್ಲಿ ಒಳಗೊಂಡ ಪೊಲೀಸ್ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿಸಬೇಕು. ಅವರ ವಿರುದ್ಧ ಇಲಾಖಾ ತನಿಖೆ ನಡೆಸಬೇಕು. ಅಲ್ಲದೆ, ತಮ್ಮ ಅಧಿಕಾರ ಬಲದಿಂದ ಮಾಡಿದ ದುಷ್ಕೃತ್ಯಕ್ಕೆ ಈ ಪೊಲೀಸ್ ಅಧಿಕಾರಗಳನ್ನು ಆಪರಾಧಿಕ ಹೊಣೆಗಾರರನ್ನಾಗಿ ಮಾಡಬೇಕು.

ಮಾಧ್ಯಮಗಳಿಗೆ ಮಾರ್ಗಸೂತ್ರ: ರೋಮಾಂಚಕ ಹಾಗೂ ತಾರತಮ್ಯದ ವರದಿಗಾರಿಕೆಯಿಂದ ಜೀವನವನ್ನು ಸರ್ವನಾಶ ಮಾಡುವ ತಮ್ಮ ಶಕ್ತಿಯ ಬಗ್ಗೆ ಮಾಧ್ಯಮಗಳು ಎಚ್ಚರಿಕೆಯಿಂದಿರಬೇಕು. ನ್ಯಾಯಾಲಯದಿಂದ ಅಧಿಕೃತ ತೀರ್ಪು ಬರುವವರೆಗೆ ಆರೋಪಿಗಳನ್ನು ಅರಪಾಧಿಗಳೆಂದು ತೀರ್ಪು ನೀಡುವುದರಿಂದ ಅವು ದೂರ ಉಳಿಯಬೇಕು. ಖುಲಾಸೆಗೊಂಡ ಅಮಾಯಕನು ಬಂಧನದಲ್ಲಿದ್ದ ವೇಳೆ, ಆತನ ವಿರುದ್ಧ ಮಾನ ಹಾನಿಕರ ವರದಿಗಳನ್ನು ಪ್ರಕಟಿಸಿದ್ದಲ್ಲಿ ಮಾಧ್ಯಮಗಳು ಕ್ಷಮಾಯಾಚನೆ ಪ್ರಕಟಿಸಬೇಕು.

ನ್ಯಾಯಾಂಗ ಸುಧಾರಣೆ: ಐಸಿಸಿಆರ್‌ಪಿಯ 14(6) ವಿಧಿಯನ್ನು ನ್ಯಾಯಾಂಗ ಚೌಕಟ್ಟಿನೊಳಗೆ ಸೇರಿಸಬೇಕು. ಚಿತ್ರಹಿಂಸೆ ತಡೆ ಮಸೂದೆಯನ್ನು ಸಂಸತ್ತು ಅನುಮೋದಿಸಬೇಕು. ತಪ್ಪತಸ್ಥ ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿಸಲು ಹಾಗೂ ಕಸ್ಟಡಿ ಹಿಂಸೆಯನ್ನು ತಡೆಯಲು ಭಯೋತ್ಪಾದನೆ ತಡೆ ಕಾಯ್ದೆ, ಭಾರತೀಯ ಸಾಕ್ಷ ಕಾಯ್ದೆ ಹಾಗೂ ದಂಡ ಪ್ರಕ್ರಿಯಾ ಸಂಹಿತೆಗಳ ಪ್ರಸ್ತಾವಗಳನ್ನು ತಿದ್ದುಪಡಿ ಮಾಡಬೇಕು.

ಸಾಂಸ್ಥಿಕ ಹಾಗೂ ಸಾಮಾಜಿಕ ಸುಧಾರಣೆ: ಎನ್‌ಎಚ್‌ಆರ್‌ಸಿ ಹಾಗೂ ಎಸ್‌ಎಚ್‌ಆರ್‌ಸಿಗಳಂತಹ ಮಾನವ ಹಕ್ಕು ಸಂಸ್ಥೆಗಳು ಖುಲಾಸೆಗೊಂಡವರ ಪ್ರಕರಣಗಳನ್ನು ಪರಿಶೀಲಿಸಲೆಂದೇ ಮೀಸಲಾಗಿರುವ ಘಟಕವೊಂದನ್ನು ಸ್ಥಾಪಿಸಬೇಕು. ಸಾರ್ವಜನಿಕರು ಸಹ ಇಂತಹ ಖುಲಾಸೆಗೊಂಡ ಜನರ ಪುನರ್ವಸತಿಯ ಬಗ್ಗೆ ಸಕ್ರಿಯ ಪ್ರಯತ್ನ ನಡೆಸಬೇಕು.

ಮಾನವ ಹಕ್ಕು ಸಂಸ್ಥೆಗಳ ವೈಫಲ್ಯ: ತಪ್ಪು ಬಂಧನ ಹಾಗೂ ಕಾನೂನು ಕ್ರಮದ ಇಂತಹ ಪ್ರಕರಣಗಳನ್ನು ಗುರುತಿಸಲು ಹಾಗೂ ಮಧ್ಯಪ್ರವೇಶಿಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ರಾಜ್ಯಗಳ ಮಾನವ ಹಕ್ಕು ಆಯೋಗಗಳಂತಹ ಮಾನವ ಹಕ್ಕು ಸಂಸ್ಥೆಗಳ ವೈಫಲ್ಯಕ್ಕೆ ಸಮಿತಿಯು ಅಸಮಾಧಾನ ವ್ಯಕ್ತಪಡಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X