Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಬೆಳ್ತಂಗಡಿ: ಸರ್ವಧರ್ಮ ಪ್ರಾರ್ಥನಾ ವಿಚಾರ...

ಬೆಳ್ತಂಗಡಿ: ಸರ್ವಧರ್ಮ ಪ್ರಾರ್ಥನಾ ವಿಚಾರ ಸಂಕಿರಣ

ವಾರ್ತಾಭಾರತಿವಾರ್ತಾಭಾರತಿ11 Dec 2016 10:10 PM IST
share
ಬೆಳ್ತಂಗಡಿ: ಸರ್ವಧರ್ಮ ಪ್ರಾರ್ಥನಾ ವಿಚಾರ ಸಂಕಿರಣ

 ಬೆಳ್ತಂಗಡಿ, ಡಿ. 11 :  ಧರ್ಮಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದಾಗಿ ಪರಸ್ಪರ ಅನುಮಾನಗಳು ಮೂಡಲು ಕಾರಣವಾಗುತ್ತಿದೆ ಇದನ್ನು ಹೋಗಲಾಡಿಸುವ ಕಾರ್ಯಕ್ಕೆ ಎಲ್ಲ ಧರ್ಮಗಲ ಮುಖಂಡರುಗಳು ಪ್ರಯತ್ನಿಸಬೇಕಾದ ಅಗತ್ಯವಿದೆ, ಧರ್ಮಗಳ ನಡುವಿನ ಸಮನ್ವಯತೆಯ ಸಾಧನೆಗಾಗಿ ಸೌಹಾರ್ದ ವೇದಿಕೆ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವೇದಿಕೆಯ ಅಧ್ಯಕ್ಷ ಹಾಗೂ ಧರ್ಮಾಧ್ಯಕ್ಷ ಬಿಶಪ್ ಲಾರೆನ್ಸ್ ಮುಕ್ಕುಯಿ ಹೇಳಿದರು. 

ಅವರು ಭಾನುವಾರ ಸೌಹಾರ್ದ ವೇದಿಕೆ ವತಿಯಿಂದ ಉದಯನಗರದಲ್ಲಿನ ಜ್ಞಾನ ನಿಲಯದಲ್ಲಿ ನಡೆದ ಪ್ರಾರ್ಥನೆಯ ಬಗ್ಗೆ ನಡೆದ ವಿಚಾರ ಸಂಕಿರಣದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

ಪರಸ್ಪರ ಅರಿವಿನ ಮೂಲಕ ಸಾಮರಸ್ಯಕ್ಕೆ ಬುನಾದಿ ಹಾಕಲು ಇಂತಹ ಕಾರ್ಯಕ್ರಮಗಳು ಅಗತ್ಯ. ಎಲ್ಲ ಧರ್ಮಗಳಲ್ಲಿಯೂ ಪ್ರಾರ್ಧನೆ ಮುಖ್ಯವಾಗಿದೆ ಏನು ಪ್ರಾರ್ಧಿಸುತ್ತೇವೆ ಎಂಬುದನ್ನು ಪರಸ್ಪರ ತಿಳಿದುಕೊಳ್ಳುವ ಪ್ರಯತ್ನ ಇದಾಗಿದೆ ಎಂದರು.

ಹಿಂದೂ ಧರ್ಮದಲ್ಲಿ ಪ್ರಾರ್ಥನೆಗಿರುವ ಮಹತ್ವದ ಬಗ್ಗೆ ಮಾತನಾಡಿದ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ , ಪ್ರಾರ್ಥನೆ ಎಂಬುದು ಚೆನ್ನಾಗಿ ಕೊಡುವಲ್ಲಿ ಬೇಡುವುದು ಎಂಬ ಅರ್ಥವನ್ನು ಹೊಂದಿದೆ. ಸರ್ವಶಕ್ತನಾದ ಭಗವಂತನಲ್ಲಿ ಬೇಡಲು ಅನ್ವಯವಾಗುವ ಶಬ್ದವಿದು. ಭಗವಂತ ಹಾಗು ಭಕ್ತನ ನಡುವೆ ಸಂವಹನ ಕ್ರಿಯೆಗಾಗಿ ಪ್ರಾರ್ಥನೆ ಇದೆ. ಹಿಂದೂ ಧರ್ಮದಲ್ಲಿ ವೈದಿಕ, ಪೌರಾಣಿಕ ಹಾಗೂ ಕರ್ಮಾಂಗದಲ್ಲಿ ಇದನ್ನು ನಿರ್ದೇಶಿಸಲ್ಪಟ್ಟಿದೆ. ಉದ್ದೇಶದ ಅಪೇಕ್ಷೆಯಿಲ್ಲದೆ ಮನುಷ್ಯ ಯಾವ ಕೆಲಸವನ್ನೂ ಮಾಡುವುದಿಲ್ಲ. ಉದ್ದೇಶವನ್ನು ಇಟ್ಟು ಕೊಂಡು ಮಾಡುವ ಪ್ರಾರ್ಥನೆ ನೈಮಿತ್ತಿಕ ಕರ್ಮವಾಗುತ್ತದೆ. ಇದು ನಿರ್ಗುಣವಾದರೆ, ಯಾವುದೇ ಅಪೇಕ್ಷೆಯಿಲ್ಲದೆ ಪ್ರಾರ್ಥನೆ ಮಾಡುವ ಯೋಗಿಗಳದ್ದು ಸಗುಣ ಪ್ರಾರ್ಥನೆಯಾಗುತ್ತದೆ. ಹೀಗಾಗಿ ಕರ್ಮದ ಅಂಗವಾಗಿ ಪ್ರಾರ್ಥನೆ ಇದೆ ಎಂದರು.

ಜೈನ ಮತದಲ್ಲಿ ಪ್ರಾರ್ಥನೆ ಕುರಿತು ಮುನಿರಾಜ ರೆಂಜಾಳ, ಇಸ್ಲಾಂ ಮತದಲ್ಲಿನ ಪ್ರಾರ್ಥನೆ ಬಗ್ಗೆ ಹಾಜಿ ಅಬ್ದುಲ್ ರಹಮಾನ್ ಹಾಗೂ ಕ್ರೈಸ್ತ ಮತದಲ್ಲಿನ ಪ್ರಾರ್ಥನೆ ವಿಚಾರವಾಗಿ ಬಗ್ಗೆ ಫಾ.ಶಾಜಿ ಮ್ಯಾಥ್ಯೂ ಉಪನ್ಯಾಸ ನೀಡಿದರು.

ಸಮನ್ವಯಕಾರರಾಗಿ ಸಂಸ್ಕೃತ ವಿದ್ವಾಂಸ ಇ. ಮಹಾಬಲ ಭಟ್, ನಿವೃತ್ತ ಪತ್ರಕರ್ತ ಶ್ರೀಕರ ಮರಾಠೆ ಉಪಸ್ಥಿತರಿದ್ದರು.

ವೇದಿಕೆ ಉಪಾಧ್ಯಕ್ಷ ಶ್ರೀಧರ ಜಿ. ಭಿಡೆ ಸ್ವಾಗತಿಸಿ ಪ್ರಸ್ತಾವಿಸಿದರು.

ವೇದಿಕೆಯ ಸದಸ್ಯರಾದ ಶ್ರೀನಾಥ್ ಹಾಗೂ ಕೇಶವ ಪೈ ಕಾರ್ಯಕ್ರಮ ನಿರ್ವಹಿಸಿದರು. 

ಸೌಹಾರ್ದ ವೇದಿಕೆ ಕಾರ್ಯದರ್ಶಿ ಬಿ. ವಿಠಲ ಶೆಟ್ಟಿ ಇದ್ದರು.

                                                                                                          

share
ವಾರ್ತಾಭಾರತಿ
ವಾರ್ತಾಭಾರತಿ
Next Story
X