ಇರಾ : ಯುವಕ ಮಂಡಲದ ವಾರ್ಷಿಕೋತ್ಸವ

ಮಂಗಳೂರು, ಡಿ.11: ಯುವಜನತೆಯ ಸಾಮುದಾಯಿಕ ಪಾಲ್ಗೊಳ್ಳುವಿಕೆಯಿಂದ ಊರಿನ ಅಭಿವೃದ್ಧಿ ಸಾಧ್ಯ. ಯುವಕರು ಸಮಾಜಮುಖಿ ಚಿಂತನೆ ಬೆಳೆಸಿಕೊಂಡು ಸಾಮಾಜಿಕ ಸಾಮರಸ್ಯ ಉಳಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಇರಾ ಯುವಕ ಮಂಡಲ ಉತ್ತಮ ಕಾರ್ಯಚಟುವಟಿಕೆ ನಡೆಸುತ್ತಿದೆ ಎಂದು ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಹೇಳಿದರು.
ಇರಾ ಯುವಕ ಮಂಡಲ ಸಭಾಂಗಣದಲ್ಲಿ ನಡೆದ ಇರಾ ಯುವಕ ಮಂಡಲ 43ನೆ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇರಾ ಗ್ರಾಪಂ ಅಧ್ಯಕ್ಷ ರಜಾಕ್ ಕುಕ್ಕಾಜೆ ಅಧ್ಯಕ್ಷತೆ ವಹಿಸಿದ್ದರು.
ಬಂಟ್ವಾಳ ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಉದ್ಯಮಿ ಚಂದ್ರಹಾಸ ಪಂಡಿತ್‌ಹೌಸ್, ಯುವಕ ಮಂಡಲದ ಅಧ್ಯಕ್ಷ ಜಯ ಮುಡಿಲ ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿತ್ ಕೊಟ್ಟಾರಿ ವರದಿ ವಾಚಿಸಿದರು.
ಪ್ರವೀಣ್ ವೈ.ಬಿ. ಸ್ವಾಗತಿಸಿದರು. ನಿತೇಶ್ ಶೆಟ್ಟಿ ವಂದಿಸಿದರು.
ಯತಿರಾಜ್ ಶೆಟ್ಟಿ ಸಂಪಿಲ ಕಾರ್ಯಕ್ರಮ ನಿರೂಪಿಸಿದರು.
ಲಕುಮಿ ತಂಡದಿಂದ ‘ದುಂಬು ಒರಿ ಪಂತೆಗೆ’ ಹಾಸ್ಯನಾಟಕ ಪ್ರದರ್ಶನಗೊಂಡಿತು.
ಬಂಟ್ಸ್‌ಹಾಸ್ಟೆಲ್ ರಾಮಕೃಷ್ಣ ಆಂಗ್ಲಮಾಧ್ಯಮ ಶಾಲೆ ವಿದ್ಯಾರ್ಥಿಗಳಿಂದ ‘ಬಲೆ ತೆಲಿಪಾಲೆ’ ಕಾರ್ಯಕ್ರಮ ನಡೆಯಿತು.







