ಕೆ.ಸಿ.ಎಫ್ ನ ನೂತನ ಅಂತರ್ಜಾಲ ತಾಣ ಅನಾವರಣ

ಸೌದಿ ಅರೇಬಿಯಾ(ಮದೀನಾ), ಡಿ.11 : ಕರ್ನಾಟಕ ಕಲ್ಚರಲ್ ಫೌಂಡೇಶನ್ ಇಂಟರ್ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೆ.ಸಿ.ಎಫ್ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳ ಅನಾವರಣ ಮದೀನಾ ಮುನವ್ವರದ ಕೆ.ಸಿ.ಎಫ್ ಭವನದಲ್ಲಿ ನಡೆಯಿತು.
ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಎಸ್.ಎಸ್.ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಶಾಫಿ ಸಅದಿ ಅವರು ಉದ್ಘಾಟಿಸಿದರು.
ದ.ಕ.ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಕೆ.ಸಿ.ಎಫ್ ನ ನೂತನ ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣವನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಅವರು, ನಾವು ಅಹ್ಲ್ ಸುನ್ನತ್ ವಲ್ ಜಮಾತ್ ಅಡಿಸ್ಥಾನದಲ್ಲಿ ಜೀವಿಸಬೇಕಾಗಿದೆ. ದ್ಸಿಕ್ರ್, ದುವಾ, ಸ್ವಲಾತ್ ವರ್ಧಿಸುವ ಕಾರ್ಯಕರ್ತರು ಸಂಘಟನೆಗೆ ಅವಶ್ಯಕತೆಯಿದ್ದು, ಎಲ್ಲಾ ಕಾರ್ಯಕರ್ತರು ಸ್ವಲಾತ್, ದ್ಸಿಕ್ರ್ ಅಧಿಕಗೊಳಿಸಬೇಕಾಗಿದೆ ಎಂದರು.
ಈ ವೇಳೆ ದ.ಕ.ಜಿಲ್ಲಾ ಸಂಯುಕ್ತ ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್, ಶಾಫಿ ಸಅದಿ ಹಾಗೂ ಬೆಳ್ತಂಗಡಿ ತಾಲೂಕು ಉಪ ಖಾಝಿ ಸಯ್ಯದ್ ಸಾದಾತ್ ತಂಙಳ್ ಹಾಗೂ ಇಶಾರ ಪ್ರಧಾನ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ ಅವರನ್ನು ಸನ್ಮಾನಿಸಲಾಯಿತು.
ಎಸ್.ಎಸ್.ಎಫ್ ಕರ್ನಾಟಕ ರಾಜ್ಯಾಧ್ಯಕ್ಷ ಶಾಫಿ ಸಅದಿ ಮಾತನಾಡಿ, ಕೆಸಿಎಫ್ ಹಜ್ಜ್ ವಾಲೇಂಟಿಯರ್ ಕಾರ್ಯಕರ್ತರ ಕೆಲಸ ಶ್ಲಾಘನೀಯವಾಗಿದ್ದು , ನಿಮ್ಮ ಕೆಲಸ ಎಲ್ಲರ ಮನಮುಟ್ಟುವಂತೆ ಮಾಡಿದೆ. ಇಂದು ಅನಾವರಣ ಗೊಂಡ ಸಾಮಾಜಿಕ ಜಾಲತಾಣದ ಮೂಲಕ ಕೆಸಿಎಫ್ ಇನ್ನಷ್ಟುಪ್ರಖ್ಯಾತಿ ಹೊಂದಲಿ ಎಂದರು .
ಈ ವೇಳೆ ಕೆಸಿಎಫ್ ಐ.ಎನ್.ಸಿ ಸದಸ್ಯರಾದ ಅಲಿ ಮುಸ್ಲಿಯಾರ್ ಬಹರೈನ್, ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಫಾರೂಕ್ ಅಬ್ಬಾಸ್ ಉಳ್ಳಾಲ್, ಕೆಸಿಎಫ್ ಜಿದ್ದಾ ಝೋನಲ್ ಅಧ್ಯಕ್ಷ ಸಯ್ಯದ್ ಅಬೂಬಕ್ಕರ್ ತಂಙಳ್, ಕೆ.ಸಿ.ಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ, ಉಮ್ಮರ್ ಸಖಾಫಿ ಪರಪ್ಪು , ಹಮೀದ್ ಫೈಝಿ, ಕೆಸಿಎಫ್ ರಾಷ್ಟ್ರೀಯ ಸಮಿತಿಯ ರಿಲೀಫ್ ಚೇರ್ಮ್ಯಾನ್ ಸಲೀಂ ಕನ್ಯಾಡಿ
ಹಾಗೂ ಎಸ್.ಎಸ್.ಎಫ್ , ಎಸ್.ವೈ.ಎಸ್ ನೇತಾರರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಸ್ವಾಗತಿಸಿದರು.
ಕೆ.ಸಿ.ಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಧನ್ಯವಾದ ಸಮರ್ಪಿಸಿದರು.
ಉಮ್ಮರ್ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.







