ಕರಾಟೆಯಲ್ಲಿ ಸಾಧನೆ

ಮೂಡಿಗೆರೆ, ಡಿ.11: ತಾಲೂಕಿನ ಚಿನ್ನಿಗ-ಜನ್ನಾಪುರದ ಎಲೀಟ್ ಮೈಂಡ್ಸ್ ಇಂಟರ್‌ನ್ಯಾಷನಲ್ ಶಾಲೆಯ 2 ತರಗತಿ ವಿದ್ಯಾರ್ಥಿಗಳು ಹಾಸನದ ವಿದ್ಯಾಸೌಧ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ವಿಎಸ್‌ಪಿಎಸ್ ಇಂಟರ್ ಸ್ಕೂಲ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಪುರುವಾಂಕರ್ ಶೌರ್ಯದೇವ್ ಪ್ರಥಮ,ಪ್ರತ್ಯುಶ್ ಪಿ.ಗೌಡ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದಲ್ಲಿ ರಚನಾ ಸುಧನ್ ದ್ವಿತೀಯ, ಹಿಮಾನ್ಯ ತೃತೀಯ ಸ್ಥಾನ ಪಡೆದಿದ್ದಾರೆ.
Next Story





