ಆಂಗ್ಲರ ವಿರುದ್ಧ ಕೊಹ್ಲಿ ಆರ್ಭಟಿಸಲು ಕಾರಣ ಇದು!
ಭಾರತೀಯರಿಗೆ ಇಷ್ಟವಾಗದ ಕೊಂಕು ನುಡಿ

ಮುಂಬೈ,ಡಿ.11: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಾಲ್ಕನೆ ಟೆಸ್ಟ್‌ನಲ್ಲಿ ದ್ವಿಶತಕದ ಸಾಧನೆಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ. ಆದರೆ ಕೊಹ್ಲಿ ಈ ಆರ್ಭಟಿಸಲು ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರ ಕೊಂಕು ನುಡಿಯೇ ಕಾರಣವಂತೆ.
ಕೊಹ್ಲಿ ಟೆಸ್ಟ್‌ನಲ್ಲಿ ಜೀವನಶ್ರೇಷ್ಠ ವೈಯಕ್ತಿಕ ಸ್ಕೋರ್ 235 ರನ್ ದಾಖಲಿಸುವ ಮೂಲಕ ಮುಂಬೈನಂತಹ ಪಿಚ್‌ನಲ್ಲಿ ಬ್ಯಾಟಿಂಗ್ ಕಠಿಣವೆಂದು ಹೇಳಿಕೆ ನೀಡಿದ್ದ ಆ್ಯಂಡರ್ಸನ್‌ಗೆ ತಿರುಗೇಟು ನೀಡಿದ್ದಾರೆ.
2014ರಲ್ಲಿ ಭಾರತಕ್ಕೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ವೇಳೆ ವಿರಾಟ್ ಕೊಹ್ಲಿ ಬಗ್ಗೆ ಆ್ಯಂಡರ್ಸನ್ ಹೇಳಿಕೆ ನೀಡಿದ್ದರು. ಅದೇ ನಿಲುವಿಗೆ ಅಂಟಿಕೊಂಡು ಆ್ಯಂಡರ್ಸನ್ ಕೆಣಕಿದ್ದರು. ಇದು ಕೊಹ್ಲಿ ಕೋಪಕ್ಕೆ ಕಾರಣವಾಗಿತ್ತು.
Next Story





