Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರವಾದಿ ಮುಹಮ್ಮದ್ (ಸ) ಅನುಪಮ ಕ್ರಾಂತಿ...

ಪ್ರವಾದಿ ಮುಹಮ್ಮದ್ (ಸ) ಅನುಪಮ ಕ್ರಾಂತಿ ತಂದ ಅನನ್ಯ ನಾಯಕ

ಎ.ಹಾಜಿರಾಎ.ಹಾಜಿರಾ11 Dec 2016 11:55 PM IST
share
ಪ್ರವಾದಿ ಮುಹಮ್ಮದ್ (ಸ) ಅನುಪಮ ಕ್ರಾಂತಿ ತಂದ ಅನನ್ಯ ನಾಯಕ

ಮುಹಮ್ಮದ್ (ಸ) ಅವರು ದೇವರುಗಳ ಸಾಲಿಗೆ ಸೇರಿಲ್ಲ. ಅವರ ಅಭಿಮಾನಿಗಳು ಮಾತ್ರವಲ್ಲ, ಅಂಧಾಭಿಮಾನಿಗಳು ಕೂಡಾ ಅವರನ್ನು ದೇವರೆನ್ನುವುದಿಲ್ಲ. ದೇವರ ಅವತಾರ ಎನ್ನುವುದಿಲ್ಲ. ದೇವರ ಪುತ್ರನೆನ್ನುವುದಿಲ್ಲ. ಮುಹಮ್ಮದ್(ಸ) ಅವರು ದೇವರ ದಾಸರಾಗಿದ್ದರು ಎಂಬ ಸ್ಪಷ್ಟ ಘೋಷಣೆ ಈಗಲೂ ಅವರು ಪರಿಚಯಿಸಿದ ಧರ್ಮದ ಮೂಲ ಮಂತ್ರದ ಅವಿಭಾಜ್ಯ ಭಾಗವಾಗಿದೆ.

ಮನುಷ್ಯ ಸಮಾಜದ ಸುಧಾರಣೆಗಾಗಿ ಕೆಲಸ ಮಾಡಿದ ಹಲವು ಮಹಾನುಭಾವರ ಚರಿತ್ರೆ ನೋಡಿದರೆ ಒಂದು ದುರಂತ ಎದ್ದು ಕಾಣುತ್ತದೆ. ಅವರಲ್ಲಿ ಹೆಚ್ಚಿನವರನ್ನು ಅವರ ಸಮಕಾಲೀನರು ಉಗ್ರವಾಗಿ ವಿರೋಧಿಸಿದ್ದಾರೆ. ಅವರು ಬಯಸಿದ ಸುಧಾರಣೆಯನ್ನು ಜನರು ಪ್ರತಿರೋಧಿಸಿದ್ದಾರೆ. ಆದರೆ ಕ್ರಮೇಣ ಸುಧಾರಕರ ವ್ಯಕ್ತಿತ್ವವು ಜನರಿಗೆ ಪ್ರಿಯವಾಗಿ ಬಿಟ್ಟಿದೆ. ಅವರ ವ್ಯಕ್ತಿತ್ವದ ಸುತ್ತ ಪವಾಡ ಪ್ರಧಾನವಾದ ಉತ್ಪ್ರೇಕ್ಷಿತ ನಂಬಿಕೆಗಳ ದಟ್ಟ ಅಡವಿಯನ್ನೇ ಜನರು ನಿರ್ಮಿಸಿಬಿಟ್ಟಿದ್ದಾರೆ. ಕಾಲ ಕ್ರಮೇಣ ಈ ಮೌಢ್ಯಗಳ ಅಡವಿ ಎಷ್ಟೊಂದು ದಟ್ಟವಾಗಿ ಬೆಳೆಯಿತೆಂದರೆ ಅವರ ಆಶಯ, ಸಂದೇಶಗಳೆಲ್ಲಾ ಆ ಅಡವಿಯ ಹಿಂದೆ ಅವಿತು ಕಣ್ಮರೆಯಾಗಿ ಬಿಟ್ಟಿತು. ದೇವರನ್ನು ಪರಿಚಯಿಸಲು ಬಂದವರನ್ನೇ ದೇವರುಗಳ ಸಾಲಲ್ಲಿ ನಿಲ್ಲಿಸಲಾಯಿತು.

ಮಿಥ್ಯ ದೇವರುಗಳಿಂದ ಸಮಾಜಕ್ಕೆ ಮುಕ್ತಿ ನೀಡಲು ಶ್ರಮಿಸಿದವರು ಸ್ವತಃ ಇನ್ನೊಬ್ಬ ಮಿಥ್ಯ ದೇವರಾಗಿ ಬಿಟ್ಟರು. ವಿಗ್ರಹಾರಾಧನೆಯನ್ನು ವಿರೋಧಿಸಿದವರ ವಿಗ್ರಹ ನಿರ್ಮಿಸಿ ಜನರು ಪೂಜಿಸ ತೊಡಗಿದರು. ಆದರೆ ಈ ಪ್ರಕ್ರಿಯೆಗೆ ಅಪವಾದವಾಗಿ ಉಳಿದ ಒಂದು ವ್ಯಕ್ತಿತ್ವವಿದ್ದರೆ ಅದು ಪ್ರವಾದಿ ಮುಹಮ್ಮದ್(ಸ) ರದ್ದು. ಪ್ರವಾದಿ ಮುಹಮ್ಮದ್ (ಸ)ರ ವ್ಯಕ್ತಿತ್ವದ ಸುತ್ತ ಮೌಢ್ಯಗಳ ಗೋಡೆ ಕಟ್ಟಲು ಜನರು ಶ್ರಮಿಸಿಲ್ಲ ಎಂದೇನೂ ಹೇಳುವಂತಿಲ್ಲ. ಅವರಿಗಿಂತ ಮುನ್ನ ಬಂದ ಹಲವು ಮಹಾಪುರುಷರನ್ನು ಯಾವ ರೀತಿ ಹಂತ ಹಂತವಾಗಿ ದೇವರಾಗಿ ಪರಿವರ್ತಿಸಲಾಯಿತು ಎಂಬುದನ್ನು ಗಮನಿಸಿದರೆ ಆ ಪೈಕಿ ಕೆಲವು ಹಂತಗಳು ಪ್ರವಾದಿ ಮುಹಮ್ಮದ್(ಸ)ರ ಕುರಿತಾಗಿ ಬೆಳೆದು ಬಂದ ಐತಿಹ್ಯಗಳಲ್ಲೂ ಎದ್ದು ಕಾಣುತ್ತವೆ. ಉದಾಹರಣೆಗೆ ಹಲವರು ಪ್ರವಾದಿಯ ವ್ಯಕ್ತಿತ್ವವನ್ನು ಶುದ್ಧ ಇತಿಹಾಸದ ಬದಲು ಭಾವಾವೇಶ ಹಾಗೂ ದಂತ ಕತೆಗಳ ಆಧಾರದಲ್ಲಿ ಚಿತ್ರಿಸಲು ಹೆಣಗಾಡಿದ್ದಾರೆ.

ಪ್ರವಾದಿ ಮನುಷ್ಯರಾಗಿದ್ದರೇ ಎಂಬುದನ್ನೇ ಕೆಲವರು ಚರ್ಚಾ ವಿಷಯವಾಗಿಸಿದ್ದೂ ಇದೆ. ಪ್ರವಾದಿಗೆ ನೆರಳು ಇತ್ತೋ ಇಲ್ಲವೋ ಎಂಬ ವಿಷಯದಲ್ಲೂ ಚರ್ಚೆಗಳು ನಡೆದದ್ದಿದೆ. ಇಂತಹ ಚರ್ಚೆಗಳ ಸ್ವಾಭಾವಿಕ ಪರಿಣಾಮವಾಗಿ ಕೆಲವು ನಿರ್ದಿಷ್ಟ ಸನ್ನಿವೇಶಗಳಲ್ಲಿ ಪ್ರವಾದಿಯ ಬೋಧನೆಗಳು, ಅವರ ಆದರ್ಶ, ಆಶಯಗಳು ಮತ್ತು ಅವರು ಬದುಕಿನುದ್ದಕ್ಕೂ ತಮ್ಮದಾಗಿಸಿಕೊಂಡಿದ್ದ ಪ್ರಧಾನ ಕಾಯಕ ಇವೆಲ್ಲಾ ಚರ್ಚೆ, ಸಂವಾದಗಳ ವ್ಯಾಪ್ತಿಯಿಂದ ದೂರ ಮಸುಕಾಗಿ ಉಳಿದದ್ದಿದೆ. ಅನೇಕ ಮಹಾ ವ್ಯಕ್ತಿತ್ವಗಳು ಈ ಬಗೆಯ ಐತಿಹಾಸಿಕ ವ್ಯತಿಚಲನೆಗಳಿಗೆ ಬಲಿಯಾಗಿ ತಮ್ಮ ಅಭಿಮಾನಿಗಳು ನಿರ್ಮಿಸಿದ ಅತಿ ವೈಭವೀಕರಣದ ಬೃಹತ್ ಗೋಪುರಗಳ ಹಿಂದೆ ಕ್ರಮೇಣ ಕಣ್ಮರೆಯಾಗಿ ಬಿಟ್ಟಿವೆ. ಇದಕ್ಕೆಲ್ಲ ವ್ಯತಿರಿಕ್ತವಾಗಿ ಪ್ರವಾದಿ ಮುಹಮ್ಮದ್(ಸ)ರ ಕುರಿತಾದ ಸತ್ಯಗಳು ಮಾತ್ರ ಇಂದಿಗೂ ಅದಮ್ಯವಾಗಿ ಉಳಿದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಮುಹಮ್ಮದ್ (ಸ) ಅವರು ದೇವರುಗಳ ಸಾಲಿಗೆ ಸೇರಿಲ್ಲ. ಅವರ ಅಭಿಮಾನಿಗಳು ಮಾತ್ರವಲ್ಲ, ಅಂಧಾಭಿಮಾನಿಗಳು ಕೂಡಾ ಅವರನ್ನು ದೇವರೆನ್ನುವುದಿಲ್ಲ.

ದೇವರ ಅವತಾರ ಎನ್ನುವುದಿಲ್ಲ. ದೇವರ ಪುತ್ರನೆನ್ನುವುದಿಲ್ಲ. ಮುಹಮ್ಮದ್ (ಸ) ಅವರು ದೇವರ ದಾಸರಾಗಿದ್ದರು ಎಂಬ ಸ್ಪಷ್ಟ ಘೋಷಣೆ ಈಗಲೂ ಅವರು ಪರಿಚಯಿಸಿದ ಧರ್ಮದ ಮೂಲ ಮಂತ್ರದ ಅವಿಭಾಜ್ಯ ಭಾಗವಾಗಿದೆ. ಕಾಲ ಕಳೆದಂತೆ ತಮ್ಮ ನಿಜ ರೂಪವನ್ನೂ ಸಾಂಗತ್ಯವನ್ನೂ ಕಳೆದುಕೊಂಡು ನಾವೀನ್ಯ ಹಾಗೂ ಬದಲಾವಣೆಗಳ ಪ್ರವಾಹದಲ್ಲಿ ಕೊಚ್ಚಿ ಹೋದ ಹಲವು ಮಹಾನುಭಾವರುಗಳು ಮತ್ತವರ ಉಪದೇಶಗಳಿಗೆ ಹೋಲಿಸಿದರೆ ಮುಹಮ್ಮದ್(ಸ) ರ ಇತಿಹಾಸ, ಅವರ ಸಂದೇಶ ಮತ್ತು ಅವರು ತಂದ ಕ್ರಾಂತಿ ಜೀವಂತವಾಗಿದೆ. ಮೊದಲನೆಯದಾಗಿ ದೇವರ ಕುರಿತಾದ ನಂಬಿಕೆಗಳನ್ನೇ ತೆಗೆದು ನೋಡಿ. ದೇವರು ಎಂಬುದು ಬಹುತೇಕ ಹೆಚ್ಚಿನೆಲ್ಲಾ ಕಾಲಗಳಲ್ಲಿ ಜನರನ್ನು ಅತ್ಯಂತ ಅಮಾನುಷ ಸ್ವರೂಪದ ಅನ್ಯಾಯ, ಶೋಷಣೆಗಳಿಗೆ ತುತ್ತಾಗಿಸಲಿಕ್ಕಾಗಿ, ಜನರ ಕಣ್ಮನಗಳನ್ನು ಕುರುಡಾಗಿಸಲಿಕ್ಕಾಗಿ, ಜನರನ್ನು ವಿಭಾಜಿಸಲಿಕ್ಕಾಗಿ ಮತ್ತು ದ್ವೇಷದ ಜ್ವಾಲಾಮುಖಿಯನ್ನೆಬ್ಬಿಸಿ ಜನರಿಂದ ಎಲ್ಲ ಬಗೆಯ ಕ್ರೂರ ಕೃತ್ಯಗಳನ್ನು ಮಾಡಿಸಲಿಕ್ಕಾಗಿ ಬಹಳ ವ್ಯಾಪಕವಾಗಿ ಬಳಕೆಯಾಗಿರುವ ಅಸ್ತ್ರ.

ದೇವರನ್ನು ತಮ್ಮ ಸಂಚುಗಳಿಗಾಗಿ ಅಸ್ತ್ರವಾಗಿ ಬಳಸಿದ ಪ್ರಸ್ತುತ ವಂಚಕರು ದೇವರ ಜೊತೆಗೇ ಧರ್ಮ, ಧರ್ಮಗ್ರಂಥಗಳು, ಪರಂಪರೆ, ಸಂಸ್ಕಾರ ಇತ್ಯಾದಿ ಎಲ್ಲವನ್ನೂ ಜನಾಂಗವಾದ, ವರ್ಣಭೇದ, ಜಾತೀಯತೆ, ಸರ್ವಾಧಿಕಾರ ಇತ್ಯಾದಿ ಅನಿಷ್ಟಗಳ ಸಮರ್ಥನೆಗಾಗಿ ತಮ್ಮ ಇಚ್ಛಾನುಸಾರ ಬಳಸಿ ಕೊಂಡಿದ್ದಾರೆ. ಇದಕ್ಕೆ ಹೋಲಿಸಿದರೆ ಪ್ರವಾದಿ ಮುಹಮ್ಮದ್ (ಸ) ಪರಿಚಯಿಸಿದ ದೇವರು, ಧರ್ಮ, ಧರ್ಮಗ್ರಂಥ ಹಾಗೂ ಸಂಸ್ಕಾರಗಳು ವಿಶ್ವ ಭ್ರಾತೃತ್ವ, ನ್ಯಾಯ ಮತ್ತು ಸಮಾನತೆಯ ಪರವಾಗಿ ಹಾಗೂ ಅನ್ಯಾಯ, ಶೋಷಣೆ ಹಾಗೂ ಮರ್ದನಗಳ ವಿರುಧ್ದ ಪ್ರತಿರೋಧದ ಅಸ್ತ್ರಗಳಾಗಿ ಬಳಕೆಯಾಗಿವೆ. ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ದೇವರು, ಧರ್ಮ ಮತ್ತು ಸಂಸ್ಕಾರಗಳು ಪುರೋಹಿತ ಪ್ರಧಾನವಾಗಲಿ, ಕಥಾಪ್ರಧಾನವಾಗಲಿ, ಮಂತ್ರಪ್ರಧಾನವಾಗಲಿ, ತತ್ವಶಾಸ್ತ್ರ ಪ್ರಧಾನವಾಗಲಿ ಅಲ್ಲ. ಅವರು ಪರಿಚಯಿಸಿದ ಹೆಚ್ಚಿನೆಲ್ಲಾ ಕಲ್ಪನೆಗಳಲ್ಲಿ ಯಾವುದೇ ಸಮಾಜದ ಅಥವಾ ಯಾವುದೇ ಕಾಲದ ಜನಸಾಮಾನ್ಯನ ಎಟುಕಿಗೆ ಸಿಗುವಷ್ಟು, ಅವನಿಗೆ ಅರ್ಥವಾಗುವಷ್ಟು ಮತ್ತು ಇತರರನ್ನು ಅವಲಂಬಿಸದೆ ಆಚರಿಸಲು ಅವನಿಗೆ ಸಾಧ್ಯವಾಗುವಷ್ಟು ಸರಳತೆ ಹಾಗೂ ಸ್ಪಷ್ಟತೆ ಇದೆ. ಆದ್ದರಿಂದಲೇ ಇಲ್ಲಿ ವಿದ್ವತ್ತಿಗೆ ಮತ್ತು ಪರಿಣತೆಗೆ ಅವಕಾಶವಿದೆಯೇ ಹೊರತು ಪೌರೋಹಿತ್ಯಕ್ಕೆ ಆಸ್ಪದವಿಲ್ಲ. ಪುರೋಹಿತರು ತಮ್ಮ ಚಾಣಾಕ್ಷತನದಿಂದ ಇಲ್ಲೂ ನುಸುಳಿಕೊಂಡಿದ್ದಾರೆ ಎನ್ನುವುದು ಸುಳ್ಳೇನಲ್ಲ. ಆದರೆ ಸರಳತೆ ಹಾಗೂ ಸ್ಪಷ್ಟತೆಯೇ ಪ್ರವಾದಿಯ ಧರ್ಮದ ಪ್ರಧಾನ ಸ್ವಭಾವವಾದ್ದರಿಂದ ಇಲ್ಲಿ ಪುರೋಹಿತನ ಪೀಠ ಸದಾ ಅಸ್ಥಿರವಾಗಿರುತ್ತದೆ. ಅವರನ್ನು ಒದ್ದೋಡಿಸಿ ಸಮಾಜವನ್ನು ಸ್ವಚ್ಛಗೊಳಿಸುವುದಕ್ಕೆ ಅವಕಾಶ ಸದಾ ಮುಕ್ತವಾಗಿರುತ್ತದೆ. ಪ್ರವಾದಿ ಮುಹಮ್ಮದ್(ಸ) ಕೇವಲ ಒಂದು ಧರ್ಮವನ್ನು ಪರಿಚಯಿಸಿ ಹೋದವರಲ್ಲ.

ಅವರು ತಾವು ಪರಿಚಯಿಸಿದ ಧರ್ಮದ ಆಶಯಗಳ ಆಧಾರದಲ್ಲಿ ಒಂದು ಆದರ್ಶ ಸಮಾಜವನ್ನು ಸ್ಥಾಪಿಸಿ ತೋರಿಸಿದವರು. ಅವರು ಸ್ಥಾಪಿಸಿದ ಸಮಾಜ ಮತ್ತು ಆಡಳಿತ ವ್ಯವಸ್ಥೆಯು ಸ್ವತಃ ಅವರ ಬದುಕಿನ ಕೊನೆಯ ದಶಕದಲ್ಲಿ ಮತ್ತು ಅವರ ನಿಧನಾನಂತರ ಕನಿಷ್ಠ ಮೂರು ದಶಕಗಳ ಕಾಲ ಸಾರ್ವಕಾಲಿಕ ಆದರ್ಶದ ರೂಪದಲ್ಲಿ ಅಸ್ತಿತ್ವದಲ್ಲಿತ್ತು. ಸ್ವತಃ ಅವರು ಮತ್ತು ಅವರ ನಾಲ್ವರು ಉತ್ತಾರಾಧಿಗಳು (ಖಲೀಫಾಗಳು) ಆಡಳಿತಗಾರರಾಗಿದ್ದರು ಆದರೆ ಅವರಲ್ಲಿ ಯಾರೂ ದೊರೆಗಳಾಗಲಿ, ಸರ್ವಾಧಿಕಾರಿಗಳಾಗಲಿ ಆಗಿರಲಿಲ್ಲ. ಹಗಲಿರುಳೆನ್ನದೆ ಯಾವುದೇ ಜನಸಾಮಾನ್ಯನು ತಾನಿಚ್ಛಿಸಿದಾಗ ಅವರನ್ನು ಭೇಟಿಯಾಗಲು ಸಾಧ್ಯವಿತ್ತು. ಅವರನ್ನು ಪ್ರಶ್ನಿಸಲು, ವಿಮರ್ಶಿಸಲು ಮತ್ತು ಅವರ ಜೊತೆ ಚರ್ಚೆ, ಸಂವಾದಗಳನ್ನು ನಡೆಸಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿತ್ತು. ಅವರ ಆಡಳಿತ ಪಾರದರ್ಶಕವಾಗಿತ್ತು. ಅವರು ಯಾರೂ ತಮಗಾಗಿ ಅರಮನೆಗಳನ್ನು ನಿರ್ಮಿಸಿಕೊಡಿರಲಿಲ್ಲ. ಅವರಿಗೆ ರಕ್ಷಕ ಭಟರಿರಲಿಲ್ಲ.

ಅವರು ಯಾರೂ ಸಿಂಹಾಸನಗಳನ್ನು ಬಳಸಲಿಲ್ಲ. ಯಾರೂ ಕಿರೀಟಗಳನ್ನಾಗಲಿ, ದುಬಾರಿ ಉಡುಗೆಗಳನ್ನಾಗಲಿ ಧರಿಸಿರಲಿಲ್ಲ. ಅಲ್ಲಿ ಎಲ್ಲ ಧರ್ಮ, ಭಾಷೆ, ಜನಾಂಗಗಳ ಜನರಿಗೆ ನ್ಯಾಯ ಲಭ್ಯವಿತ್ತು. ಸ್ವಜನಪಕ್ಷಪಾತಕ್ಕೆ ಅವಕಾಶವಿರಲಿಲ್ಲ. ಏಷ್ಯಾ ಮತ್ತು ಯೂರೋಪಿನ ಇತರೆಡೆಗಳ ರಾಜಾಡಳಿತದ ಇತಿಹಾಸಕ್ಕೆ ಹೋಲಿಸಿದರೆ ಮುಸ್ಲಿಮ್ ಸಮಾಜದಲ್ಲಿ ಈ ಅನಿಷ್ಟವು ತಡವಾಗಿ ಆರಂಭವಾಯಿತು. ಆದರೆ ರಾಜಾಡಳಿತವನ್ನು ಪ್ರಶ್ನಿಸುವ ಹಾಗೂ ಪ್ರತಿರೋಧಿಸುವ ವಿಷಯದಲ್ಲಿ ಮುಸ್ಲಿಮರ ಚರಿತ್ರೆ ಇತರೆಡೆಗಳ ಚರಿತ್ರೆಗಳಿಗಿಂತ ತುಂಬಾ ದೀರ್ಘವಾಗಿದೆ. ಇಂದಿಗೂ ರಾಜಾಳ್ವಿಕೆಯ ಕಪ್ಪುಚುಕ್ಕಿಗಳು ಮುಸ್ಲಿಮ್ ಜಗತ್ತಿನ ಕೆಲವೆಡೆ ಜೀವಂತವಿರುವುದು ನಿಜವಾದರೂ ಅವುಗಳ ವಿರುದ್ಧ ಪ್ರತಿರೋಧ ಸಾಕಷ್ಟು ಬಲಿಷ್ಠವಾಗಿದೆ ಮತ್ತು ಧರ್ಮವೇ ಪ್ರಸ್ತುತ ಪ್ರತಿರೋಧದ ತಳಹದಿಯಾಗಿದೆ. ಪ್ರವಾದಿ ಮುಹಮ್ಮದ್(ಸ) ಪರಿಚಯಿಸಿದ ಧರ್ಮವು ಸಾರ್ವತ್ರಿಕ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಮಹಿಳಾ ಸ್ವಾತಂತ್ರ್ಯ, ದಾಸ್ಯ ವಿಮೋಚನೆ, ಸಾರ್ವತ್ರಿಕ ಶಿಕ್ಷಣ ಮುಂತಾದ ಮೌಲ್ಯಗಳನ್ನು ಎತ್ತಿ ಹಿಡಿಯಿತು. ಕೆಲವು ವಿಷಯಗಳಲ್ಲಿ ಅದು ತಕ್ಷಣದ ಕಠಿಣ ಕ್ರಮಗಳ ಮೂಲಕ ಸಮಾಜವನ್ನು ಸ್ವಚ್ಛ ಗೊಳಿಸಿದರೆ ಇನ್ನು ಕೆಲವು ವಿಷಯಗಳಲ್ಲಿ ಹಂತಹಂತವಾದ ದೂರಗಾಮಿ ಕ್ರಮಗಳನ್ನು ಅವಲಂಬಿಸಿತು. ವ್ಯಭಿಚಾರ ಮುಕ್ತ, ಶರಾಬುಮುಕ್ತ ಹಾಗೂ ಜೂಜುಮುಕ್ತವಾದ ಸಮಾಜವನ್ನು ಸ್ಥಾಪಿಸುವಲ್ಲಿ ಪ್ರವಾದಿವವರ್ಯರು (ಸ) ತಮ್ಮ ಜೀವಿತಾವಧಿಯಲ್ಲೇ ಯಶಸ್ವಿಯಾದರು.

ಗುಲಾಮ ವಿಮೋಚನೆಯ ನಿಟ್ಟಿನಲ್ಲಿ ಅವರು ಪರಿಚಯಿಸಿದ ಪರಿಣಾಮಕಾರಿ, ದೂರಗಾಮಿ ಕ್ರಮಗಳಿಂದಾಗಿ ಅವರ ಕಾಲದಲ್ಲೇ ಸಾವಿರಾರು ಗುಲಾಮರು ದಾಸ್ಯಮುಕ್ತರಾದರು. ಮಾತ್ರವಲ್ಲ, ಕ್ರಮೇಣ ಸಂಪೂರ್ಣ ಸಮಾಜವೇ ದಾಸ್ಯ ಮುಕ್ತವಾಯಿತು. ಅರಾಜಕತೆ ತೊಲಗಿ ಕಾನೂನಿನ ಆಡಳಿತ ಸ್ಥಾಪಿತವಾಯಿತು. ಮಹಿಳೆಯರಿಗೆ ಭದ್ರತೆ ದೊರಕಿತು. ಘನತೆಯ ಹಾಗೂ ಗೌರವದ ಸ್ಥಾನ ಪ್ರಾಪ್ತವಾಯಿತು. ಸಮಾಜದಲ್ಲಿ ಪರಿಸರ ಪ್ರಜ್ಞೆ ಮೂಡಿತು. ತೀವ್ರವಾದದ ವಿರುದ್ಧ ಜಾಗೃತಿ ಬೆಳೆಯಿತು. ಮಾತಿನ ಧಾಟಿ, ನಡಿಗೆಯ ವರಸೆ, ಖರ್ಚಿನ ವೈಖರಿ, ಆರಾಧನಾ ವಿಧಾನ ಮುಂತಾದ ಎಲ್ಲ ವಿಷಯಗಳಲ್ಲೂ ಮಾಧ್ಯಮ ನಿಲುವು ಜನಪ್ರಿಯವಾಯಿತು. ವಿಭಿನ್ನ ಮತಧರ್ಮಗಳ ಅನುಯಾಯಿಗಳ ನಡುವಣ ಆರೋಗ್ಯಕರ ಸಂವಾದಗಳ ಪರಂಪರೆ ಆರಂಭ ವಾಯಿತು. ಯುದ್ಧ ಸಮೇತ ಎಲ್ಲ ವಿಷಯಗಳಲ್ಲಿ ನ್ಯಾಯ ಅನುಕಂಪದಂತಹ ಮಾನವೀಯ ಮೌಲ್ಯಗಳೇ ಪ್ರಧಾನವಾಗಿದ್ದ ನೀತಿ ಸಂಹಿತೆಗಳು ಅನುಷ್ಠಾನಕ್ಕೆ ಬಂದವು. ಕೈದಿಗಳ ಹಕ್ಕುಗಳ ನಿಯಮಗಳು ಬಂದವು. ಒಟ್ಟಿನಲ್ಲಿ, ಪ್ರವಾದಿ ಮುಹಮ್ಮದ್(ಸ)ರ ಉಪದೇಶಗಳು ಕೇವಲ ಗ್ರಂಥಗಳ ಅಲಂಕಾರವಾಗಿ ಉಳಿಯಲಿಲ್ಲ. ಅವು ನಿಜಕ್ಕೂ ಸಮಾಜದಲ್ಲಿ ಅನುಷ್ಠಾನಗೊಂಡವು ಮತ್ತು ದೊಡ್ಡ ಪ್ರಮಾಣದಲ್ಲಿ ಎಲ್ಲರಿಗೂ ಸತ್ಫಲಗಳನ್ನು ನೀಡಿದವು. ಬದಲಾವಣೆಗೆ ಚಾಲನೆ ನೀಡುವ ಚೈತನ್ಯ ಇಂದಿಗೂ ಅವರು ಪರಿಚಯಿಸಿದ ವ್ಯವಸ್ಥೆಯಲ್ಲಿ ಇದೆ.

share
ಎ.ಹಾಜಿರಾ
ಎ.ಹಾಜಿರಾ
Next Story
X