ಆರೋಗ್ಯಕ್ಕೆ ಭಾರತದ ಹೂಡಿಕೆ ಹೆಚ್ಚಬೇಕಿದೆ: ಡಬ್ಲುಎಚ್‌ಒ
ಕೋಲ್ಕತಾ, ಡಿ.11: ಭಾರತವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಹೂಡಿಕೆ ಮಾಡುವ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳ ಮೇಲೆ ವಿಶೇಷ ಗಮನದೊಂದಿಗೆ, ಮೂಲ ಸೌಕರ್ಯ ಹಾಗೂ ಮಾನವ ಸಂಪನ್ಮೂಲ ಸಹಿತ ಎಲ್ಲ ಆಯಾಮಗಳಲ್ಲಿ ಸಮೃದ್ಧವಾದ ಆರೋಗ್ಯ ಒದಗಣೆ ವ್ಯವಸ್ಥೆಯನ್ನು ಕಟ್ಟಬೇಕಾಗಿದೆಯೆಂದು ವಿಶ್ವ ಆರೋಗ್ಯ ಸಂಘಟನೆ (ಡಬ್ಲುಎಚ್‌ಒ) ಇಂದು ಹೇಳಿದೆ.
ರಾಷ್ಟ್ರಗಳಲ್ಲಿ ಆರೋಗ್ಯವಂತ ಜನಸಂಖ್ಯೆ ಸಮೃದ್ಧಿಯಾಗಬೇಕೆಂಬುದು ತಮಗೆ ತಿಳಿದಿದೆ. ಭಾರತದ ಆರ್ಥಿಕ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಳವು ಪ್ರಧಾನವಾದುದು. ಆರೋಗ್ಯಕ್ಕೆ ಹೂಡಿಕೆಯೆಂದರೆ ಭಾರತದ ಅಭಿವೃದ್ಧಿ ಗಾಥೆಗೆ ಹೂಡಿಕೆ ಮಾಡಿದಂತೆ ಡಬ್ಲುಎಚ್‌ಒದ ಭಾರತದ ಪ್ರತಿನಿಧಿ ಡಾ.ಹೆಂಕ್ ಬೆಕೆಡಂ ಅಭಿಪ್ರಾಯಿಸಿದ್ದಾರೆ.
ಅದಕ್ಕಾಗಿ ತಾವು ಜಾಗತಿಕ ಆರೋಗ್ಯ ವ್ಯಾಪ್ತಿ (ಯುಎಚ್‌ಸಿ) ಹಾಗೂ ತಾಳಿಕೆಯ ಅಭಿವೃದ್ಧಿ ಗುರಿಗಳು ಮುಖ್ಯವಾಗಿ ಆರೋಗ್ಯದ ಗುರಿಗಳೆಡೆಗೆ ಶೀಘ್ರವಾಗಿ ಮುಂದುವರಿಯುವುದು ಹಾಗೂ ಪ್ರಗತಿಗೆ ವೇಗವರ್ಧನೆ ನೀಡುವುದು ಅಗತ್ಯವಾಗಿದೆಯೆಂದು ಅವರು ಸಲಹೆ ನೀಡಿದ್ದಾರೆ.
ಗತ ವರ್ತಮಾನದಲ್ಲಿ ಭಾರತವು ಆರೋಗ್ಯ ಸೇವಾ ವಲಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದರೂ, ಆರೋಗ್ಯಕ್ಕಾಗಿ ಕಡಿಮೆ ಹೂಡಿಕೆ, ಅಪರ್ಯಾಪ್ತ ಆರ್ಥಿಕ ಬೆಂಬಲ ಹಾಗೂ ಭಾರೀ ಖರ್ಚಿನ ಕಾರಣಗಳಿಂದಾಗಿ, ಆರೋಗ್ಯ ಸೇವಾ ಶುಲ್ಕ ಪಾವತಿ ಯಿಂದಲೇ ದೇಶದ 6 ಕೋಟಿ ಜನರು ಇನ್ನೂ ಬಡತನದಲ್ಲೇ ಇದ್ದಾರೆಂದು ಡಾ.ಬೆಕೆಡಂ ಹೇಳಿದ್ದಾರೆ.
ಆರ್ಥಿಕ ಸಂಕಷ್ಟದಿಂದಾಗಿ ಅನೇಕರು ಆರೋಗ್ಯ ಸೇವೆಗಳಿಂದ ವಂಚಿತರಾಗುತ್ತಿದ್ದಾರೆ ಅಥವಾ ತಡವಾಗಿ ಪಡೆಯುತ್ತಿದ್ದಾರೆಂದು ಅವರು ತಿಳಿಸಿದ್ದಾರೆ.





