‘ ಪಿಲಿಬೈಲ್ ಯಮುನಕ್ಕ ‘ ದೃಶ್ಯ ಫೇಸ್ಬುಕ್ನಲ್ಲಿ ಅಪ್ಲೋಡ್ : ಪೇಜ್ ವಿರುದ್ಧ ದೂರು
![‘ ಪಿಲಿಬೈಲ್ ಯಮುನಕ್ಕ ‘ ದೃಶ್ಯ ಫೇಸ್ಬುಕ್ನಲ್ಲಿ ಅಪ್ಲೋಡ್ : ಪೇಜ್ ವಿರುದ್ಧ ದೂರು ‘ ಪಿಲಿಬೈಲ್ ಯಮುನಕ್ಕ ‘ ದೃಶ್ಯ ಫೇಸ್ಬುಕ್ನಲ್ಲಿ ಅಪ್ಲೋಡ್ : ಪೇಜ್ ವಿರುದ್ಧ ದೂರು](https://www.varthabharati.in/sites/default/files/images/articles/2016/12/12/download.jpg)
ಮಂಗಳೂರು, ಡಿ. 12 : ಪಿಲಿಬೈಲ್ ಯಮುನಕ್ಕ ಚಿತ್ರದ ಹಾಸ್ಯ ದೃಶ್ಯದ ತುಣುಕೊಂದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಹಾಕಿದುದರ ವಿರುದ್ಧ ಚಿತ್ರ ತಂಡವು ಮಂಗಳೂರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದೆ.
ಥಿಯೇಟರ್ನಲ್ಲಿ 3 ನಿಮಿಷಗಳ ದೃಶ್ಯ ಚಿತ್ರೀಕರಿಸಿ , ‘ತುಳು ಕಾಮಿಡಿ ವಿಡಿಯೋಸ್’ ಪೇಜ್ ನಲ್ಲಿ ಅನುಮತಿಯಿಲ್ಲದೆ ಅಪ್ಲೋಡ್ ಮಾಡಲಾಗಿದೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ ಎಂದು ತಿಳಿದು ಬಂದಿದೆ.
ತುಳು ಕಾಮಿಡಿ ವಿಡಿಯೋಸ್ ಪೇಜ್ ವಿರುದ್ಧ ಸೂಕ್ತ ಕ್ರಮಕ್ಕೆ ಚಿತ್ರ ತಂಡವು ಆಗ್ರಹಿಸಿದೆ .
Next Story