ಬಂಟ್ವಾಳದಲ್ಲಿ ಹಿಟ್ ಆ್ಯಂಡ್ ರನ್ : ಓರ್ವ ಮೃತ್ಯು
![ಬಂಟ್ವಾಳದಲ್ಲಿ ಹಿಟ್ ಆ್ಯಂಡ್ ರನ್ : ಓರ್ವ ಮೃತ್ಯು ಬಂಟ್ವಾಳದಲ್ಲಿ ಹಿಟ್ ಆ್ಯಂಡ್ ರನ್ : ಓರ್ವ ಮೃತ್ಯು](https://www.varthabharati.in/sites/default/files/images/articles/2016/12/12/hit-and-run.jpg)
ಬಂಟ್ವಾಳ, ಡಿ.12 : ಮಾರುತಿ ಕಾರು ಢಿಕ್ಕಿ ಹೊಡೆದ ಪರಿಣಾಮ ದಾರಿಹೋಕನೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ಸಮೀಪದ ಲೊರೆಟ್ಟೊ ಪದವು ಬಳಿ ನಡೆದಿದೆ.
ಮೃತಪಟ್ಟವರನ್ನು ಸ್ಥಳೀಯ ನಿವಾಸಿ ರೇಮಂಡ್ ಫೆರ್ನಾಂಡಿಸ್ (59) ಎಂದು ಗುರುತಿಸಲಾಗಿದೆ.
ಘಟನೆಯ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದು , ಈ ಬಗ್ಗೆ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story