ಪಾಕಿಸ್ತಾನಿಗಳಿಗೆ ಕೆಲಸ ಕೊಡುವವರನ್ನು ಶತ್ರುಗಳೆಂದು ಪರಿಗಣಿಸಬೇಕು: ಶಿವಸೇನೆ

ಮುಂಬೈ,ಡಿಸೆಂಬರ್ 13: ಮಣ್ಣಿನ ಮಕ್ಕಳಿಗೆ ಕೆಲಸ ನೀಡುವುದೆನ್ನುವ ನಿಯೋಜಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಶಯವನ್ನು ಪ್ರಧಾನಿ ಮೋದಿ ಕೂಡಾ ಅನುಸರಿಸಬೇಕೆಂದು ಶಿವಸೇನೆ ಗರ್ಜಿಸಿದೆ ಎಂದು ವರದಿಯಾಗಿದೆ. ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಕಲಾಕಾರರನ್ನು ಹೊರದಬ್ಬಬೇಕೆಂದು ಶಿವಸೇನೆ ಆಗ್ರಹಿಸಿದೆ.
ಸೌಹಾರ್ದದ ನೆಪ ಮುಂದಿಟ್ಟು ಭಾರತಕ್ಕೆ ಬರುವ ಕಲಾವಿದರು,ಟಿವಿಆ್ಯಂಕರ್‌ಗಳು ದೊಡ್ಡ ಮಟ್ಟದ ವರಮಾನವನ್ನು ಗಳಿಸುತ್ತಿದ್ದಾರೆ. ಇವರು ದೇಶಕ್ಕೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಭಾರತದಲ್ಲಿ ಡೊನಾಲ್ಡ್ ಟ್ರಂಪ್‌ರ ಆಶಯವನ್ನು ಜಾರಿಗೊಳಿಸಿದರೆ ಈ ಪಾಕಿಸ್ತಾನಿಗಳಿಗೆ ಕೆಲಸ ಇಲ್ಲಿಸಿಗುವುದಿಲ್ಲ. ಎಂದು ಶಿವಸೇನೆ ಹೇಳಿದೆ.
ಸಾಮ್ನಾದಲ್ಲಿ ಶಿವಸೇನೆ ಸಂಪಾದಕೀಯದಲ್ಲಿ ಬರೆದಿದ್ದು ಟ್ರಂಪ್‌ಗೆ ಇದು ಜಾರಿಗೆ ತರಲು ಸಾಧ್ಯವಿದ್ದರೆ ಮೋದಿಗೂ ಅದು ಸಾಧ್ಯವಿದೆ ಎಂದು ಪತ್ರಿಕೆ ಹೇಳಿದೆ.
ಅಮೆರಿಕದವರ ಕೆಲಸವನ್ನು ಹೊರದೇಶದವರು ಕಿತ್ತುಕೊಳ್ಳಲು ಬಿಡಲಾರೆ ಎಂದು ಟ್ರಂಪ್ ಹೇಳಿದ್ದರು. ಇದು ಭಾರತ ಸಹಿತ ಹೊರರಾಷ್ಟ್ರಗಳ ಅನಿವಾಸಿಗಳಿಗೆ ದೊಡ್ಡ ಪ್ರಮಾಣದಲ್ಲಿ ಬಾಧಕವಾಗಲಿದೆ. ಅಮೆರಿಕದ ಪ್ರಮುಖ ಸಂಸ್ಥೆಗಳೆಲ್ಲದ್ದರಲ್ಲಿಯೂ ಭಾರತೀಯರು ಉದ್ಯೋಗವನ್ನು ಹೊಂದಿದ್ದಾರೆಂದು ವರದಿ ತಿಳಿಸಿದೆ.







