ಟಿಬೇಟಿಯನ್ ಧರ್ಮಗುರು ದಲೈಲಾಮ ಮುಂಡಗೋಡಿಗೆ

ಮುಂಡಗೋಡ, ಡಿ.13 : ಟಿಬೇಟಿಯನ್ ಧರ್ಮಗುರು, ನೊಬೆಲ್ ಶಾಂತಿ ಪುರಸ್ಕೃತರಾದ ದಲೈಲಾಮ ಅವರು ಡಿ.16ರಂದು ಮುಂಡಗೋಡ ಟಿಬೇಟಿ ಕಾಲೋನಿಗೆ ಆಗಮಿಸಲಿದ್ದಾರೆ.
ಅವರು ಡಿ.16ರಂದು ಬೆಂಗಳೂರು-ಹುಬ್ಬಳ್ಳಿ ಮಾರ್ಗವಾಗಿ ಮುಂಡಗೋಡ ಟಿಬೇಟಿ ಕಾಲೋನಿಯ ದ್ರೆಪುಂಗ್ ಲಾಚಿ ಬೌದ್ದಮಠಕ್ಕೆ ಬೆಳಿಗ್ಗೆ 11-30ಗಂಟೆಗೆ ಆಗಮಿಸಲಿದ್ದಾರೆ. ಡಿ.17ರಂದು ಬೆಳಿಗ್ಗೆ 9-45ಗಂಟೆಗೆ ದ್ರೆಪುಂಗ್ ಲೊಸಲಿಂಗ್ ಧ್ಯಾನ ಕೇಂದ್ರವನ್ನು ಮತ್ತು 10ಗಂಟೆಗೆ ಹೊಸ ಚರ್ಚಾ ಸಭಾಂಗಣವನ್ನು ಉದ್ಘಾಟಿಸಲಿದ್ದಾರೆ.
ಡಿ.18ರಿಂದ ಡಿ.20ರವರೆಗೆ ' ಟಿಬೇಟ್ : ವಿಜ್ಞಾನದ ಮೊದಲ ಹೆಜ್ಜೆ' ಎಂಬ ವಿಷಯದ ಕುರಿತು ನಡೆಯಲಿರುವ ವಿಚಾರಸಂಕೀರಣದಲ್ಲಿ ಅವರು ಭಾಗವಹಿಸಲಿದ್ದಾರೆ. ಡಿ.21ರಂದು ಬೆಳಿಗ್ಗೆ 8 ಗಂಟೆಗೆ ದ್ರೆಪುಂಗ್ ಬೌದ್ದಮಠ ಸ್ಥಾಪನೆಯ 600ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿ.22ರಂದು ಬೆಳಿಗ್ಗೆ ಗೇಷಮಾ ಡಿಗ್ರಿ ಪ್ರದಾನ ಸಮಾರಂಭದಲ್ಲಿ, ಮಧ್ಯಾಹ್ನ 1ಗಂಟೆಗೆ ಟಿಬೇಟಿಯನ್ ಸೆಂಟ್ರಲ್ ಸ್ಕೂಲ್‌ನ ಗೋಲ್ಡನ್ ಜುಬ್‌ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿ.23ರಂದು ಬೆಳಿಗ್ಗೆ 9ಗಂಟೆಗೆ ದಲೈಲಾಮಾರ ಸಮ್ಮುಖದಲ್ಲಿ ಗೆದುನ್‌ನ್ಗಾಚೊ ಪ್ರಾರ್ಥನೆ ಕಾರ್ಯಕ್ರಮವಿದೆ. ಡಿ.24ರಂದು ಬೆಳಿಗ್ಗೆ 8 ಗಂಟೆಗೆ ದಲೈಲಾಮಾ ಅವರು ಮುಂಡಗೋಡ ಟಿಬೆಟಿ ಕಾಲೋನಿ-ಹುಬ್ಬಳ್ಳಿ ಮಾರ್ಗವಾಗಿ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.





