ವಿಶ್ವಸಂಸ್ಥೆ ಮುಖ್ಯಸ್ಥರಾಗಿ ಗುಟರಸ್ ಪ್ರಮಾಣ

ವಿಶ್ವಸಂಸ್ಥೆ, ಡಿ. 13: ಪೋರ್ಚುಗಲ್‌ನ ಮಾಜಿ ಪ್ರಧಾನಿ ಆಂಟೋನಿಯೊ ಗುಟರಸ್ ಸೋಮವಾರ ವಿಶ್ವಸಂಸ್ಥೆಯ ಒಂಬತ್ತನೆ ಮಹಾಕಾರ್ಯದರ್ಶಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
67 ವರ್ಷದ ಗುಟರಸ್ 193 ಸದಸ್ಯ ದೇಶಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ವಿಶ್ವಸಂಸ್ಥೆಯ ಸನ್ನದಿನ ಮೇಲೆ ಕೈಯಿಟ್ಟು ಅಧಿಕಾರದ ಪ್ರಮಾಣವಚನ ಸ್ವೀಕರಿಸಿದರು.
ನಿರ್ಗಮನ ಮಹಾಕಾರ್ಯದರ್ಶಿ ದಕ್ಷಿಣ ಕೊರಿಯದ 72 ವರ್ಷದ ಬಾನ್ ಕಿ ಮೂನ್‌ರ ಸ್ಥಾನದಲ್ಲಿ ಅವರು ಜನವರಿ ಒಂದರಿಂದ ಕಾರ್ಯನಿರ್ವಹಿಸಲಿದ್ದಾರೆ.
ಐದು ವರ್ಷಗಳ ಎರಡು ಅವಧಿಯನ್ನು ಪೂರೈಸಿದ ಬಳಿಕ ಈ ವರ್ಷದ ಕೊನೆಯಲ್ಲಿ ಬಾನ್ ಅಧಿಕಾರಿಂದ ಕೆಳಗಿಳಿಯಲಿದ್ದಾರೆ.
ಗುಟರಸ್ 1995ರಿಂದ 2002ರವರೆಗೆ ಪೋರ್ಚುಗಲ್‌ನ ಪ್ರಧಾನಿಯಾಗಿದ್ದರು ಹಾಗೂ 2005ರಿಂದ 2015ರವರೆಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಶನರ್ ಆಗಿದ್ದರು.
Next Story





