ಟ್ರಂಪ್ ಭೇಟಿಯಾಗಲು ಯಾವುದೇ ಕ್ಷಣದಲ್ಲಿ ಸಿದ್ಧ: ಪುಟಿನ್

ಮಾಸ್ಕೊ, ಡಿ. 13: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಯಾವುದೇ ಸಮಯದಲ್ಲಿ ಭೇಟಿಯಾಗಲು ತಾನು ಸಿದ್ಧನಿದ್ದೇನೆ ಎಂದು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳುತ್ತಾರೆ.
ಟ್ರಂಪ್‌ರೊಂದಿಗೆ ಭೇಟಿ ಏರ್ಪಡಿಸುವ ಸಾಧ್ಯತೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪುಟಿನ್, ‘‘ನಾವು ಯಾವುದೇ ಕ್ಷಣದಲ್ಲಿ ತಯಾರಿದ್ದೇವೆ. ನಮ್ಮ ಕಡೆಯಿಂದ ಯಾವುದೇ ಸಮಸ್ಯೆಯಿಲ್ಲ’’ ಎಂದು ಹೇಳಿದರು.
‘‘ಅಮೆರಿಕದ ಅಧ್ಯಕ್ಷರಾಗಿ ಹೊಸದಾಗಿ ಆಯ್ಕೆಯಾಗಿರುವ ಟ್ರಂಪ್, ರಶ್ಯ-ಅಮೆರಿಕ ಸಂಬಂಧವನ್ನು ಸಾಮಾನ್ಯ ಸ್ಥಿತಿಗೆ ತರುವ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡಿದ್ದಾರೆ. ಇದನ್ನು ನಾವು ಬೆಂಬಲಿಸುತ್ತೇವೆ’’ ಎಂದರು.
ಪುಟಿನ್ ಸಂದರ್ಶನದ ಅಕ್ಷರ ಪ್ರತಿಯನ್ನು ಕ್ರೆಮ್ಲಿನ್ ಮಂಗಳವಾರ ಬಿಡುಗಡೆ ಮಾಡಿದೆ.
Next Story





