ರಾಜ್ಯಮಟ್ಟದ ಮಹಿಳಾ ಕಬಡ್ಡಿ : ದ.ಕ. ತಂಡಕ್ಕೆ ಪ್ರಶಸ್ತಿ

ಮಂಗಳೂರು, ಡಿ.13 : ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಡಿ.3ರಿಂದ 5ರವರೆಗೆ ಗದಗದಲ್ಲಿ ನಡೆದ ರಾಜ್ಯಮಟ್ಟದ ಮಹಿಳಾ ಕಬಡ್ಡಿ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಕಬಡ್ಡಿ ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.
ವಿಕಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ತೇಜಶ್ರೀ, ಜೆಸ್ಟಿನಾ ಥೋಮಸ್, ಪೂರ್ಣಿಮಾ, ಪ್ರಣವಿ, ಹರ್ಷಿಣಿ ಭಾಗವಹಿಸಿದ್ದರು.
ವಿಕಾಸ್ ಕಾಲೇಜಿನ ಪ್ರಾಂಶುಪಾಲ ರಾಜಾರಾಮ್ ರಾವ್, ಉಪಪ್ರಾಂಶುಪಾಲೆ ಮೋಹನಾ ಆರ್., ವಾಣಿಜ್ಯ ವಿಭಾಗದ ಉಪನ್ಯಾಸಕಿ ಐಶ್ವರ್ಯಾ, ದೈಹಿಕ ನಿರ್ದೇಶಕ ರಮೇಶ್ ಪೂಜಾರಿ, ಕಬಡ್ಡಿ ಕೋಚ್ ಆಕಾಶ್ ಉಪಸ್ಥಿತರಿದ್ದರು.
Next Story





