ರೂ.33 ಲಕ್ಷ ಮೌಲ್ಯದ ಹೊಸ ನೋಟು ಪತ್ತೆ: ಐವರು ವಶಕ್ಕೆ

ಮುಂಬೈ, ಡಿ.13: ಠಾಣೆ ಜಿಲ್ಲೆಯ ನವಿ ಮುಂಬೈ ಹಾಗೂ ಉಲ್ಲಾಸ ನಗರಗಳಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ರೂ.33 ಲಕ್ಷ ಮೌಲ್ಯದ ರೂ.2 ಸಾವಿರದ ಹೊಸ ನೋಟುಗಳನ್ನು ವಶಪಡಿಸಿಕೊಂಡಿದ್ದು, ಐವರನ್ನು ವಶಕ್ಕೆ ಪಡೆಯಲಾಗಿದೆಯೆಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ನವಿ ಮುಂಬೈಯಲ್ಲಿ ರೂ.23.70 ಲಕ್ಷ ಮೌಲ್ಯದ ಹೊಸ ನೋಟುಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಹಾಗೂ ಉಲ್ಲಾಸ ನಗರದಲ್ಲಿ ರೂ. 9.76 ಲಕ್ಷ ಮೌಲ್ಯದ ರೂ. 2 ಸಾವಿರದ ನೋಟುಗಳನ್ನು ಪತ್ತೆ ಹಚ್ಚಿದ ಬಳಿಕ ಮೂವರನ್ನು ನಿನ್ನೆ ಸಂಜೆ ವಶಪಡಿಸಿಕೊಳ್ಳಲಾಗಿದೆಯೆಂದು ಅವರು ವಿವರಿಸಿದ್ದಾರೆ.
ನವಿ ಮುಂಬೈಯ ಪ್ರಕರಣದಲ್ಲಿ ನೋಟುಗಳು ಲಭಿಸಿದ ಬಗೆಯ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಲು ಆರೋಪಿಗಳು ವಿಫಲರಾಗಿದ್ದಾರೆಂದು ಕೋಪರ್ ಖೈರನೆ ಪೊಲೀಸರು ತಿಳಿಸಿದ್ದಾರೆ.
Next Story





