ರಾಷ್ಟ್ರೀಯ ಬ್ಯಾಡ್ಮಿಂಟನ್ : ಉಡುಪಿ ಜಿಲ್ಲೆ ಪ್ರಿ ಕ್ವಾರ್ಟರ್ ಫೈನಲ್ ಗೆ
ಉಡುಪಿ, ಡಿ.13: ಉಡುಪಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಶ್ರಯದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಇಂದು ಉಡುಪಿ ಅಜ್ಜರಕಾಡಿನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 41ನೆ ಜ್ಯೂನಿಯರ್ ರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಆರಂಭಿಕ ಸುತ್ತಿನಲ್ಲಿ ಕರ್ನಾಟಕದ ಬಾಲಕ ಬಾಲಕಿಯರು ವಿಜಯಿಯಾಗುವ ಮೂಲಕ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
19ವರ್ಷ ಕೆಳಗಿನ ಮಿಕ್ಸ್‌ಡ್ ಡಬಲ್ಸ್‌ನಲ್ಲಿ ಏರ್ ಇಂಡಿಯಾದ ಧ್ರುವ ಕಪಿಲಾ ಮತ್ತು ಕರ್ನಾಟಕದ ಮಿಥುಲಾ ಯು.ಕೆ. ಹಾಗೂ ಕರ್ನಾಟಕದ ನಿಖಿಲ್‌ಶ್ಯಾಮ್ ಮತ್ತು ಅಪೇಕ್ಷಾ ನಾಯಕ್, 19ವರ್ಷ ಕೆಳಗಿನ ಬಾಲಕರ ಡಬಲ್ಸ್‌ನಲ್ಲಿ ಕರ್ನಾಟಕದ ಲಕ್ಷ್ಮಣ್ ನಿಖಿತ್ ಮತ್ತು ಅಭಿ ಅಮುಧನ್, 17ವರ್ಷ ಕೆಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ಕರ್ನಾಟಕದ ರಮ್ಯ ಸಿ.ವಿ. ಮತ್ತು ಶೀತಲ್ ಡಿ., ಅಶ್ವಿನಿ ಭಟ್ ಮತ್ತು ಮಿಥುಲಾ ಯು.ಕೆ. ಹಾಗೂ ಅನನ್ಯ ಪ್ರವೀಣ್ ಮತ್ತು ಮೇಧಾ ಶಶಿಧರನ್, 19ವರ್ಷ ಕೆಳಗಿನ ಬಾಲಕಿಯರ ಡಬಲ್ಸ್‌ನಲ್ಲಿ ಏರ್ ಇಂಡಿಯಾದ ಮಹಿಮಾ ಅಗರ್‌ವಾಲ್ ಮತ್ತು ಕರ್ನಾಟಕದ ಶಿಖಾ ಗೌತಮ್ ಹಾಗೂ ಕರ್ನಾಟಕದ ಅಪೇಕ್ಷಾ ನಾಯಕ್ ಮತ್ತು ಅರ್ಚನಾ ಪೈ, 17ವರ್ಷ ಕೆಳಗಿನ ಬಾಲಕರ ಡಬಲ್ಸ್‌ನಲ್ಲಿ ಕರ್ನಾಟಕದ ನಿತಿನ್ ಎಚ್.ವಿ., ಶಮಂತ್ ರಾವ್ ಕಿದಿಯೂರು ಜಯ ಸಾಧಿಸಿದ್ದಾರೆ.





