ಮಹಾಬಲ ಎಂ ಕಲ್ಮಡ್ಕ

ಬೆಳ್ತಂಗಡಿ, ಡಿ.13 : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಪ್ರಕಟವಾಗುತ್ತಿರುವ "ನಿರಂತರ" ಮಾಸಪತ್ರಿಕೆಯ ಸಂಪಾದಕ ಮಹಾಬಲ ಎಂ ಕಲ್ಮಡ್ಕ (46) ಮಂಗಳವಾರ ಮುಂಜಾನೆ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೂಲತಃ ಸುಳ್ಯ ತಾಲ್ಲಾಕಿನ ಕಲ್ಮಡ್ಕ ನಿವಾಸಿಯಾದ ಅವರು ಕಳೆದ 12 ವರ್ಷಗಳಿಂದ ಧರ್ಮಸ್ಥಳದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಪ್ರಧಾನ ಕಚೇರಿಯಲ್ಲಿ ನಿರಂತರ ಮಾಸಪತ್ರಿಕೆಯ ಸಂಪಾದಕರಾಗಿ ಕೆಲಸ ಮಾಡುತ್ತಿದ್ದರು.
Next Story





