ಬಂಟ್ವಾಳ : ಮಿಲಾದ್ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಬಂಟ್ವಾಳ, ಡಿ. 13: ಈದ್ ಮಿಲಾದ್ ಪ್ರಯುಕ್ತ ಬಂಟ್ವಾಳ ಸರಕಾರಿ ಆಸ್ಪತ್ರೆ ಹಾಗೂ ಬಿ.ಸಿ.ರೋಡ್ ಸೋಮಯಾಜಿ ಆಸ್ಪತ್ರೆಯಲ್ಲಿ ಜವಾನ್ ಫ್ರೆಂಡ್ಸ್ ಕೈಕಂಬ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಸದಸ್ಯ ಮುಹಮ್ಮದ್ ಶರೀಫ್, ಲೊರೆಟ್ಟೋ ಜುಮಾ ಮಸೀದಿ ಮಾಜಿ ಅಧ್ಯಕ್ಷ ಬಿ.ಎಚ್.ಅಹ್ಮದ್, ಸರಕಾರಿ ಆಸ್ಪತ್ರೆ ವೈದ್ಯ ಸುರೇಂದ್ರ ನಾಯಕ್, ಆಶಿಕ್ ಕುಕ್ಕಾಜೆ, ಜವಾನ್ ಫ್ರೆಂಡ್ಸ್ ಸದಸ್ಯರಾದ ರಿಯಾರ್ಜವಾನ್, ಸತ್ತರ್ ನಂದರಬೆಟ್ಟು, ನಿಸಾರ್ ಲೊರೆಟ್ಟೋ ಪದವು, ನಝೀರ್ ಪರ್ಲಿಯಾ, ಯಾಸಿರ್ ಬಂಟ್ವಾಳ್, ದಾವೂದ್ ನೆಲ್ಯಾಡಿ, ನೌಫಾಲ್, ತಸ್ಲೀಮ್ ಆಲಾಡಿ ಮತ್ತಿತರರು ಉಪಸ್ಥಿತರಿದ್ದರು.
Next Story





