Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಸಚಿನ್ ಹಾದಿಯಲ್ಲಿ ಹೆಜ್ಜೆ ಇರಿಸಿದ...

ಸಚಿನ್ ಹಾದಿಯಲ್ಲಿ ಹೆಜ್ಜೆ ಇರಿಸಿದ ಮ್ಯಾಗ್ನಿಫಿಸೆಂಟ್ ಕೊಹ್ಲಿ

*ನಾಯಕತ್ವದಲ್ಲಿ ತೆಂಡುಲ್ಕರನ್ನು ಮೀರಿಸಿದ ಕೊಹ್ಲಿ

ವಾರ್ತಾಭಾರತಿವಾರ್ತಾಭಾರತಿ13 Dec 2016 11:10 PM IST
share
ಸಚಿನ್ ಹಾದಿಯಲ್ಲಿ ಹೆಜ್ಜೆ ಇರಿಸಿದ ಮ್ಯಾಗ್ನಿಫಿಸೆಂಟ್ ಕೊಹ್ಲಿ

 ಮುಂಬೈ, ಡಿ.13: ವಾಂಖೆಡೆ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ  ನಾಲ್ಕನೆ ಟೆಸ್ಟ್‌ನ ಮೂರನೆ ದಿನವಾಗಿರುವ ಶನಿವಾರ ಚೇತೇಶ್ವರ ಪೂಜಾರ ಹಿಂದಿನ ದಿನ ಗಳಿಸಿದ್ದ ವೈಯಕ್ತಿಕ ಸ್ಕೋರ್‌ಗೆ ಒಂದು ರನ್‌ನ್ನು ಸೇರಿಸದೆ ಪೆವಿಲಿಯನ್‌ಗೆ ವಾಪಸಾದಾಗ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಉಂಟಾಗಿತ್ತು. ಪ್ರತಿ ಪಂದ್ಯದಲ್ಲೂ ಚೆನ್ನಾಗಿ ಆಡುವ ಪೂಜಾರ ಅರ್ಧ ಶತಕ ದಾಖಲಿಸುವಲ್ಲಿ ವಿಫಲರಾದರು.

 ಭಾರತ ದಿನದ ಆಟದ ಮೊದಲ ಓವರ್‌ನ ಎರಡನೆ ಎಸೆತದಲ್ಲಿ ಪ್ರಮುಖ ವಿಕೆಟ್‌ನ್ನು ಕಳೆದುಕೊಂಡಿತ್ತು. ಪೂಜಾರ 47 ರನ್ ಗಳಿಸಿ ಔಟಾದಾಗ ಇಂಗ್ಲೆಂಡ್‌ನ ಆಟಗಾರರಿಗೆ ಭಾರೀ ಯಶಸ್ಸು ಸಿಕ್ಕಿದ ಖುಶಿ. ನೆಲಕಚ್ಚಿ ಆಡುವ ಪೂಜಾರ ಔಟಾದಾಗ ಕೊಹ್ಲಿ ನಿಧಾನವಾಗಿ ಕ್ರೀಸ್‌ಗೆ ಹೆಜ್ಜೆ ಇರಿಸಿದರು. ಎಲ್ಲಡೆಯಿಂದ ‘‘ಕೊಹ್ಲಿ.. ಕೊಹ್ಲಿ ’’ ಎಂಬ ಹರ್ಷೋದ್ಗಾರ ಕೇಳಿ ಬಂತು.

ಸಚಿನ್ ತೆಂಡುಲ್ಕರ್ 2013ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದಾಗ ಅವರ ಸ್ಥಾನ ತುಂಬುವವರು ಯಾರೆಂಬ ಪ್ರಶ್ನೆ ಎದುರಾಗಿತ್ತು. ಕೊಹ್ಲಿ ಜೊತೆಗೆ ಹಲವರ ಹೆಸರು ಕೇಳಿ ಬಂದಿತ್ತು.

     ಆ ಹೊತ್ತು ಕೊಹ್ಲಿ ಅವರು ಸಚಿನ್ ಸ್ಥಾನ ತುಂಬುವ ಭರವಸೆ ಮೂಡಿಸಿದ್ದರು.ಕಳೆದ ಮೂರು ವರ್ಷಗಳಲ್ಲಿ ಕೊಹ್ಲಿ ಬಹಳಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಪ್ರಸ್ತುತ ಅವರು ವಿಶ್ವದ ನಂ.1ಟೆಸ್ಟ್ ತಂಡವಾಗಿರುವ ಭಾರತದ ಯಶಸ್ವಿ ನಾಯಕ.

  ವಿರಾಟ್ ಕೊಹ್ಲಿ ತನ್ನ ಸಾಮರ್ಥ್ಯದ ಬಗ್ಗೆ ಟೀಕಿಸಿದ್ದ ಇಂಗ್ಲೆಂಡ್‌ನ ಬೌಲರ್‌ಗಳಿಗೆ ಬ್ಯಾಟ್‌ನ ಮೂಲಕ ಉತ್ತರ ನೀಡಿದರು. ಟೆಸ್ಟ್‌ನಲ್ಲಿ ಜೀವನ ಶ್ರೇಷ್ಠ 235 ರನ್ ಗಳಿಸಿದ ಕೊಹ್ಲಿ ಪ್ರಸ್ತುತ ಸಾಲಿನಲ್ಲಿ ಮೂರನೆ ದ್ವಿಶತಕ ದಾಖಲಿಸಿದರು. ರಾಹುಲ್ ದ್ರಾವಿಡ್ 2011ರಲ್ಲಿ ಟೆಸ್ಟ್‌ನಲ್ಲಿ ಸಾವಿರಕ್ಕೂ ಅಧಿಕ ರನ್ ದಾಖಲಿಸಿದ್ದರು. ಆ ಬಳಿಕ ದಿಲ್ಲಿಯ ದಾಂಡಿಗ ಕೊಹ್ಲಿ ಈ ಸಾಧನೆ ಮಾಡಿದ ಮೊದಲ ಭಾರತದ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.

   ವಿರಾಟ್ ಕೊಹ್ಲಿ ಅವರು ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20 ಕ್ರಿಕೆಟ್‌ನಲ್ಲೂ 50 ರನ್ ಸರಾಸರಿ ಹೊಂದಿದ್ದಾರೆ.ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯಂತೆ ಈ ವರ್ಷ ಎಲ್ಲ ವಿಧದ ಕ್ರಿಕೆಟ್‌ನಲ್ಲೂ ಸಾಧನೆ ಮಾಡಿರುವ ಇನ್ನೊಬ್ಬ ಕ್ರಿಕೆಟಿಗ ಇಲ್ಲ. ಸಚಿನ್ 24 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 100 ಶತಕ ದಾಖಲಿಸಿದ್ದರು. ಇದೀಗ ಕೊಹ್ಲಿ ಕೇವಲ ಎಂಟು ವರ್ಷಗಳಲ್ಲಿ 41 ಶತಕ ದಾಖಲಿಸುವ ಮೂಲಕ ಸಚಿನ್ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಚಿನ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 34,347 ರನ್ ದಾಖಲಿಸಿದ್ದರು. ಕೊಹ್ಲಿ 11,764 ರನ್ ದಾಖಲಿಸಿ ತನ್ನ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ.

ಇಂಗ್ಲೆಂಡ್ ವಿರುದ್ಧ ಯಶಸ್ವಿಯಾಗಲು ಸಚಿನ್ ಟಿಪ್ಸ್: ಕೊಹ್ಲಿ 19ರ ಹರೆಯದಲ್ಲಿ ಏಕದಿನ ಕ್ರಿಕೆಟ್ ಪ್ರವೇಶಿಸಿದ್ದರು. ಮೂರು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡರು.

 ಕೊಹ್ಲಿ ಟೆಸ್ಟ್‌ನಲ್ಲಿ 15 ಮತ್ತು ಏಕದಿನ ಕ್ರಿಕೆಟ್‌ನಲ್ಲಿ 26 ಶತಕ ಬಾರಿಸಿದ್ದಾರೆ. ಕೊಹ್ಲಿ ಇಂಗ್ಲೆಂಡ್ ವಿರುದ್ಧ ನಾಗ್ಪುರದಲ್ಲಿ 2012, ಡಿ.13ರಂದು ಮೊದಲ ಶತಕ ದಾಖಲಿಸಿದ್ದರು. ಅದು ಅವರ ವೃತ್ತಿ ಬದುಕಿನ ಮೂರನೆ ಟೆಸ್ಟ್ ಶತಕವಾಗಿತ್ತು. ಮತ್ತೆ ಅವರಿಂದ ಇಂಗ್ಲೆಂಡ್ ವಿರುದ್ಧ 4 ವರ್ಷಗಳ ಬಳಿಕ ಶತಕ ದಾಖಲಾಗಿದೆ. 2016, ನ.17ರಂದು ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೆ ಟೆಸ್ಟ್ ಶತಕ ದಾಖಲಿಸಿದರು. ಇದು ಅವರ 14ನೆ ಟೆಸ್ಟ್ ಶತಕವಾಗಿತ್ತು.

2014ರಲ್ಲಿ ಇಂಗ್ಲೆಂಡ್ ವಿರುದ್ಧ 5 ಟೆಸ್ಟ್‌ಗಳ ಸರಣಿಯಲ್ಲಿ 13.4 ಸರಾಸರಿಯಂತೆ 134 ರನ್ ಗಳಿಸಿದ್ದರು. ಗರಿಷ್ಠ ವೈಯಕ್ತಿಕ ಸ್ಕೋರ್ 39.

 ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿದ ಕೂಡಲೇ ಸಚಿನ್ ತೆಂಡುಲ್ಕರ್ ಅವರನ್ನು ಭೇಟಿಯಾಗಿ ತನ್ನ ವೈಫಲ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಟಿಪ್ಸ್ ಪಡೆದಿದ್ದರು. ತೆಂಡುಲ್ಕರ್ ನೀಡಿದ ಕೆಲವು ಸಲಹೆಗಳು ನೆರವಿಗೆ ಬಂದಿರುವುದನ್ನು ಕೊಹ್ಲಿ ಇದೀಗ ನೆನಪಿಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಸಲಹೆ ಪಡೆದ ಬಳಿಕ ತನ್ನ ಕ್ರಿಕೆಟ್ ಬದುಕು ಸುಧಾರಣೆಗೊಂಡಿತು ಎಂದು ಕೊಹ್ಲಿ ಹೇಳಿದ್ದಾರೆ.

ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ 128 ಸರಾಸರಿಯಂತೆ 640 ರನ್ ದಾಖಲಿಸಿದ್ದಾರೆ.

 ನಾಯಕತ್ವ: ಸಚಿನ್ ತೆಂಡುಲ್ಕರ್ ಅವರಿಗಿಂತ ನಾಯಕತ್ವದಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದಾರೆ. ಸಚಿನ್ ನಾಯಕತ್ವ ವಹಿಸಿಕೊಂಡು ಮುಗ್ಗರಿಸಿದ್ದರು. ಆದರೆ ಕೊಹ್ಲಿ ತನ್ನ ಮೇಲೆ ನಾಯಕತ್ವದ ಹೊರೆ ಇದ್ದರೂ, ಅವರ ಬ್ಯಾಟಿಂಗ್‌ನ ಮೇಲೆ ಪರಿಣಾಮ ಬೀರಿಲ್ಲ. ಅವರು ನಾಯಕರಾದ ಬಳಿಕ ಬ್ಯಾಟಿಂಗ್‌ನಲ್ಲಿ ಇನ್ನಷ್ಟು ಮಿಂಚುತ್ತಿದ್ದಾರೆ.

  2014ರಲ್ಲಿ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಯಿಂದ ತೆರವಾದ ಕ್ಯಾಪ್ಟನ್ ಹುದ್ದೆಯನ್ನು ವಿರಾಟ್ ಕೊಹ್ಲಿ ವಹಿಸಿಕೊಂಡಾಗ ಟೆಸ್ಟ್ ತಂಡದ ನಾಯಕರಾದಾಗ ಕೊಹ್ಲಿ ಬ್ಯಾಟಿಂಗ್‌ನಲ್ಲಿ 41ರನ್ ಸರಾಸರಿ ಹೊಂದಿದ್ದರು. ಈಗ ಅವರ ಬ್ಯಾಟಿಂಗ್ ಸರಾಸರಿ 65.5ಕ್ಕೆ ಏರಿತ್ತು. ಸತತ ಐದು ಟೆಸ್ಟ್ ಸರಣಿಗಳಲ್ಲಿ ಅವರ ನಾಯಕತ್ವದಲ್ಲಿ ಭಾರತ ಜಯ ಗಳಿಸಿತು. ಕೊಹ್ಲಿ ನಾಯಕತ್ವದಲ್ಲಿ ಭಾರತ ಮತ್ತೆ ನಂ.1 ಸ್ಥಾನಕ್ಕೇರಿತು. 2014ರಲ್ಲಿ ಇಂಗ್ಲೆಂಡ್ ವಿರುದ್ಧ ಕೊಹ್ಲಿ ಅನುಭವಿಸಿದ್ದ ವೈಫಲ್ಯವನ್ನು ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ನಿವಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಜಯ ಗಳಿಸಿರುವುದು ಕಳೆದ ಹದಿನೈದು ತಿಂಗಳಲ್ಲಿ ಭಾರತ ಗಳಿಸಿದ ಉತ್ತಮ ಸರಣಿ ಜಯ ಎಂದು ಕೊಹ್ಲಿ ಹೇಳಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X