ಡಿ.15-16: ಸಾಗರ ಕವಚ ಪ್ರಯೋಗ
ಮಂಗಳೂರು, ಡಿ.13: ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಡಿ.15, 16ರಂದು ‘ಸಾಗರ ಕವಚ’ ಅಣಕು ಕಾರ್ಯಾಚರಣೆ ಆಯೋಜಿಸಲಾಗಿದೆ.
ಭಯೋತ್ಪಾದನಾ ದಾಳಿ ಸೇರಿದಂತೆ ದುಷ್ಕೃತ್ಯಗಳನ್ನು ತಡೆಗಟ್ಟಲು ಯಾವ ರೀತಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಮತ್ತು ಭದ್ರತಾ ದೃಷ್ಟಿಯಿಂದ ಪ್ರಸ್ತುತ ರಕ್ಷಣಾ ಕ್ರಮಗಳು ಮತ್ತು ಸಿದ್ಧತೆಗಳು ಯಾವ ರೀತಿ ಸಮರ್ಥವಾಗಿವೆ ಎಂಬುದರ ಸ್ವಯಂ ಮೌಲ್ಯಮಾಪನದ ಉದ್ದೇಶದಿಂದ ಈ ಪ್ರಯೋಗವನ್ನು ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





