ಮಿಲಾದುನ್ನಬಿಗೆ ಸಿಹಿ, ಪಾನೀಯ ಹಂಚಿದ ಹಿಂದೂಗಳು
ವೈರಲ್ ಚಿತ್ರಗಳು

ತಿರುವನಂತಪುರಂ,ಡಿ.13: ವಿಶ್ವಾದ್ಯಂತ ಮುಸ್ಲಿಮರು ಪ್ರವಾದಿಯವರ ಜನ್ಮದಿನ ಈದ್‌ಮಿಲಾದ್‌ನ್ನು ಶ್ರದ್ಧೆ-ಭಕ್ತಿಯಿಂದ ಆಚರಿಸಿದ್ದಾರೆ. ಈ ದಿನದಂದು ಸಿಹಿಗಳನ್ನು ವಿತರಿಸಲಾಗುತ್ತದೆ,ಪ್ರವಾದಿಯವರ ಜೀವನದ ಬಗ್ಗೆ ಪ್ರವಚನಗಳನ್ನು ಏರ್ಪಡಿಸ ಲಾಗುತ್ತದೆ. ಇವೆಲ್ಲದರ ನಡುವೆ ಈಗಿನ ದಿನಗಳಲ್ಲಿ ಅತ್ಯಗತ್ಯವಾಗಿರುವ,ಸಮುದಾಯಗಳ ನಡುವೆ ಸೋದರ ಭಾವನೆಗಳನ್ನು ಬೆಳೆಸಬಲ್ಲ ಸನ್ನಿವೇಶಕ್ಕೆ ಕೇರಳ ಸಾಕ್ಷಿಯಾಗಿದೆ. ಹಿಂದುಗಳ ಗುಂಪೊಂದು ಈದ್‌ಮಿಲಾದ್ ಮೆರವಣಿಗೆಯಲ್ಲಿ ಭಾಗವಹಿಸಿದ್ದವರಿಗೆ ಸಿಹಿಗಳನ್ನು ವಿತರಿಸಿದೆ. ‘ಅನ್ ಅಫಿಷಿಯಲ್ ’ಹೆಸರಿನ ಜನಪ್ರಿಯ ಫೇಸ್‌ಬುಕ್ ಪೇಜ್‌ನಲ್ಲಿ ಸುಬ್ರಮಣಿಯನ್ ಸ್ವಾಮಿ ಈ ಚಿತ್ರಗಳನ್ನು ಶೇರ್ ಮಾಡಿದ್ದು, ವೈರಲ್ ಆಗಿವೆ.
ಕೇರಳದ ಮಲಬಾರ್ ಜಿಲ್ಲೆಯ ಚಂದ್ರಗಿರಿ,ಉದುಮ,ತಿರೂರ,ಕೊಂಡೊಟ್ಟಿ ಮತ್ತು ನೆಡಿಯಿರಪ್ಪು ಇತ್ಯಾದಿ ಕಡೆಗಳಲ್ಲಿ ಹಿಂದುಗಳು ಈದ್‌ಮಿಲಾದ್ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಮುಸ್ಲಿಮರಿಗೆ ಸಾಂಪ್ರದಾಯಿಕ ಪಾಯಸ ಮತ್ತು ಪಾನೀಯಗಳನ್ನು ವಿತರಿಸಿದ್ದಾರೆ. ಅಂದ ಹಾಗೆ ಇವರಲ್ಲಿ ಕೆಲವು ಅಯ್ಯಪ್ಪ ವ್ರತಧಾರಿಗಳೂ ಇದ್ದರು.





