Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ತಮಿಳುನಾಡು: ಗಾಯದ ಮೇಲೆ ಬರೆ

ತಮಿಳುನಾಡು: ಗಾಯದ ಮೇಲೆ ಬರೆ

ವಾರ್ತಾಭಾರತಿವಾರ್ತಾಭಾರತಿ13 Dec 2016 11:55 PM IST
share
ತಮಿಳುನಾಡು: ಗಾಯದ ಮೇಲೆ ಬರೆ

ತಮಿಳುನಾಡು ಅಕ್ಷರಶಃ ದಿಗ್ಬಂಧನದಲ್ಲಿದೆ. ಒಳ-ಹೊರಗಿನ ದುರಂತಗಳಿಂದ ಅದು ತತ್ತರಿಸಿ ಕೂತಿದೆ. ಒಂದೆಡೆ ಮನುಷ್ಯನೇ ಸೃಷ್ಟಿಸಿದ ಅವಾಂತರಗಳು ಅಲ್ಲಿನ ಜನಸಾಮಾನ್ಯರನ್ನು ಸಂಕಟಕ್ಕೀಡು ಮಾಡಿದ್ದರೆ, ಗಾಯದ ಮೇಲೆ ಬರೆ ಎಳೆದಂತೆ ಪ್ರಕೃತಿಯೂ ಅವರ ಮೇಲೆ ಮುನಿದಿದೆ. ಕಳೆದ ಎರಡು ದಿನಗಳಿಂದ ವಾರ್ದಾ ಚಂಡಮಾರುತ ಅಲ್ಲಿ ನಡೆಸುತ್ತಿರುವ ಅನಾಹುತಗಳು ಸುನಾಮಿಯ ಕೆಟ್ಟ ದಿನವನ್ನು ಅವರಿಗೆ ನೆನಪಿಸುವಂತೆ ಮಾಡಿದೆ. ಈ ಬಾರಿಯ ಪ್ರಕೃತಿ ವಿಕೋಪ ಸುನಾಮಿಯಷ್ಟು ಬೃಹತ್ತಾದುದು ಅಲ್ಲ. ಸಾವುನೋವು-ನಾಶನಷ್ಟ ಇವುಗಳನ್ನು ಗಮನಿಸಿದರೆ ಸುನಾಮಿಯ ಮುಂದೆ ವಾರ್ದಾ ಚಂಡಮಾರುತ ಏನೇನೂ ಅಲ್ಲ. ಆದರೆ ಈ ವಾರ್ದಾ ಅವರ ಅತ್ಯಂತ ದುಃಖದಾಯಕ ದಿನಗಳಲ್ಲಿ ಬಂದು ಎರಗಿದೆ. ಕಳೆದ ಒಂದು ತಿಂಗಳಲ್ಲಿ ಬೇರೆ ಬೇರೆ ರೂಪದಲ್ಲಿ ಮೂರು ಬಗೆಯ ಚಂಡಮಾರುತ ಅವರ ಬದುಕಿನ ಮೇಲೆ ಎರಗಿದೆ.

ನೋಟು ನಿಷೇಧ ತಮಿಳರ ಮೇಲೆರಗಿದೆ ಮೊದಲ ಚಂಡಮಾರುತ. ಅದು ಇಡೀ ದೇಶದ ಜನರು ಈ ಚಂಡಮಾರುತದ ಸಂತ್ರಸ್ತರಾಗಿದ್ದರೂ ತಮಿಳರ ಸ್ಥಿತಿ ತುಸು ಭಿನ್ನವಾದುದು. ಯಾಕೆಂದರೆ, ಇಂತಹ ಸಂಕಟದ ಸಮಯದಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡು ತನ್ನ ಜನರ ಹಿತಾಸಕ್ತಿಯನ್ನು ಕಾಪಾಡಬೇಕಾಗಿದ್ದ ಅವರ ‘ಅಮ್ಮ’ ಐಸಿಯುವಿನಲ್ಲಿ ಮಲಗಿದ್ದರು. ಕಳೆದ ಒಂದು ತಿಂಗಳಿಂದ ತಮಿಳುನಾಡಿನ ಮುಖ್ಯಮಂತ್ರಿ ಸ್ಥಾನ ಇದ್ದೂ ಇಲ್ಲದಂತಹ ಸ್ಥಿತಿಯಲ್ಲಿತ್ತು. ಉಳಿದೆಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ತಮ್ಮ ರಾಜ್ಯದಹಿತಾಸಕ್ತಿಗೆ ಪೂರಕವಾಗಿ ಕೇಂದ್ರದ ಜೊತೆಗೆ ಮಾತನಾಡುತ್ತಿರುವಾಗ ತಮಿಳುನಾಡು ಮಾತ್ರ ನೋಟು ನಿಷೇಧದ ಗೊಂದಲದಲ್ಲಿತ್ತು. ಈ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರವನ್ನು ತಳೆಯುವ ಧೈರ್ಯ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತರಿಗೆ ಇರಲಿಲ್ಲ. ಪರವಾಗಿ ಮಾತನಾಡಿದರೆ ಅಥವಾ ವಿರುದ್ಧವಾಗಿ ಮಾತನಾಡಿದರೆ ಅದು ಜಯಲಲಿತಾ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆಯೋ ಎಂಬ ಗೊಂದಲದಲ್ಲಿ ಅವರ ಆಪ್ತರು ನಿಂತಿದ್ದರು. ಜಯಲಲಿತಾ ಅವರಂತೂ ಸಂಪೂರ್ಣ ಅಸ್ವಸ್ಥರಾಗಿದ್ದರು. ನೋಟು ನಿಷೇಧ ಸಂಗತಿ ಅವರಿಗೆ ಗೊತ್ತಿತ್ತೋ ಇಲ್ಲವೋ ಎಂಬ ಬಗ್ಗೆ ಇನ್ನೂ ಅನುಮಾನ ಉಳಿದೇ ಇದೆ. ನೋಟು ನಿಷೇಧ ಜಾರಿಗೆ ತರುವಸಂದರ್ಭದಲ್ಲಿ ಜಯಲಲಿತಾ ಸ್ಥಿತಿ ತೀರಾ ಬಿಗಡಾಯಿಸಿತ್ತು. ಈ ಸಂದರ್ಭದಲ್ಲಿ ‘ಜನ ಸಾಮಾನ್ಯರ ಚಿನ್ನಕ್ಕೆ ಕೈ ಹಾಕಬೇಡಿ’ ಎಂದು ಜಯಲಲಿತಾ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದರು ಎಂಬ ಸುದ್ದಿಯಿದೆ. ಆದರೆ ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ಎನ್ನುವುದು ಇನ್ನೂ ಸ್ಪಷ್ಟವಿಲ್ಲ.

ತಮಿಳುನಾಡು ಶ್ರಮಜೀವಿಗಳ ನಾಡು. ಒಂದೆಡೆ ಕೃಷಿಕರು, ಮಗದೊಂದೆಡೆ ಮೀನುಗಾರರು. ಇವರ ಮೂಲಭೂತ ಆವಶ್ಯಕತೆಗಳಿಗೆ ಸ್ಪಂದಿಸಿದ ಕಾರಣಕ್ಕಾಗಿಯೇ ಜಯಲಲಿತಾ ಜನರ ಪಾಲಿಗೆ ಅಮ್ಮಾ ಆಗಿ ಪರಿವರ್ತನೆಗೊಂಡಿದ್ದರು. ನೋಟು ನಿಷೇಧ ಜಾರಿಗೆ ಬಂದಾಗ ಅತಿ ತೊಂದರೆಗೆ ಸಿಲುಕಿದವರೂ ಇದೇ ಶ್ರಮಜೀವಿಗಳು. ಈ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳುವುದಕ್ಕೆ ಅಮ್ಮ ಇದ್ದಿರಲಿಲ್ಲ. ಆದರೂ ಅದು ಹೇಗೋ ತಮಿಳುನಾಡಿನ ಸಾಮಾನ್ಯ ಜನರು ಹೊಂದಾಣಿಕೆ ಮಾಡುತ್ತಿದ್ದರು. ನೋಟು ನಿಷೇಧ ತನ್ನ ಪರಿಣಾಮವನ್ನು ಇನ್ನಷ್ಟು ತೀವ್ರಗೊಳಿಸಿದ ಹೊತ್ತಿನಲ್ಲಿ ಜಯಲಲಿತಾ ತೀರಿ ಹೋದರು. ತಮಿಳರ ಬದುಕಿನಲ್ಲಿ ಬೀಸಿದ ಎರಡನೆ ಚಂಡಮಾರುತ ಇದಾಗಿತ್ತು. ಬಹುಶಃ ನೋಟುನಿಷೇಧದ ಕಾವಿನಿಂದ ನಲುಗಿರುವ ಕಾರಣದಿಂದಲೋ ಏನೋ, ಜಯಲಲಿತಾ ಅವರ ಸಾವು, ರಾಜ್ಯದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಡಲಿಲ್ಲ. ಆದರೆ, ಒಂದು ವಾರಗಳ ಕಾಲ ಅಕ್ಷರಶಃ ತಮಿಳುನಾಡು ಬಂದ್ ಆಗಿತ್ತು. ಮೊದಲೇ ಎಟಿಎಂಗಳು ದುಡ್ಡಿಲ್ಲದೆ ಮುಚ್ಚಿದ್ದವು. ಇದೀಗ ಜಯಲಲಿತಾ ಸಾವನ್ನು ಬ್ಯಾಂಕುಗಳು ತಮಗೆ ಪೂರಕವಾಗಿ ಬಳಸಿಕೊಂಡವು. ಜನರು ಮಾತ್ರ ಅತ್ತ ಧರಿ, ಇತ್ತ ಪುಲಿ ಎಂಬ ಸ್ಥಿತಿಯಲ್ಲಿ ನರಳಬೇಕಾಯಿತು. ಎರಡೆರಡು ಬಂದ್‌ಗಳಿಂದ ಜನರು ತತ್ತರಿಸಬೇಕಾಯಿತು. ಇದೀಗ ಮತ್ತೆ ನಿಜವಾದ ಚಂಡಮಾರುತ ತಮಿಳರ ಮೇಲೆರಗಿದೆ. ಅಪಾರ ಪ್ರಮಾಣದಲ್ಲಿ ಸಾವುನೋವು ಸಂಭವಿಸಿದೆ. ಈಗಾಗಲೇ ಒಳಗೊಳಗೆ ಜರ್ಜರಿತಗೊಂಡಿದ್ದ ತಮಿಳರ ಜನರ ಹೊರಗಿನ ಬದುಕೂ ಈ ಚಂಡಮಾರುತದಿಂದ ಕುಸಿತು ಕೂತಿದೆ. ಅಪಾರ ಬೆಳೆ ನಾಶವಾಗಿದೆ. ಜನರು ಬೀದಿಗಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಮೀನುಗಾರರು ಕಡಲಿಗೆ ಇಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರತಿದಿನ ಕಡಲಿಗಿಳಿದರೆ ಮಾತ್ರ ಅವರಿಗೆ ಕೂಳು. ಆದರೆ ಕಡಲಿಗೂ ಇಳಿಯುವಂತಿಲ್ಲ. ಇತ್ತ ನೋಟು ನಿಷೇಧದಿಂದಾಗಿ ಇತರ ಕೆಲಸವನ್ನೂ ಮಾಡುವಂತಿಲ್ಲ. ಕೃಷಿ ಕ್ಷೇತ್ರವೂ ತತ್ತರಿಸಿ ಕೂತಿದೆ. ಕೇಂದ್ರದ ನೆರವನ್ನು ಯಾಚಿಸುವುದಕ್ಕೆ ತಮಿಳುನಾಡಿನಲ್ಲಿ ಒಬ್ಬ ಅಧಿಕೃತ ನಾಯಕನ ಘೋಷಣೆ ಇನ್ನೂ ಆಗಿಲ್ಲ. ಮಾಧ್ಯಮಗಳು ಜಯಲಲಿತಾ ಉತ್ತರಾಧಿಕಾರಿಗಳ ಕುರಿತಂತೆ ಚಿಂತೆ ಮಾಡುತ್ತಿವೆಯೇ ಹೊರತು, ಅತಂತ್ರವಾಗಿರುವ ಅಲ್ಲಿನ ಜನಸಾಮಾನ್ಯರ ಕಡೆಗೆ ಯಾರೂ ಗಮನವನ್ನೇ ಹರಿಸುತ್ತಿಲ್ಲ.

ವಿಪರ್ಯಾಸ ಗಮನಿಸಿ. ಒಂದೆಡೆ ತಮಿಳುನಾಡಿನ ಮುಖ್ಯಮಂತ್ರಿ ಯಾರೂ ಎನ್ನುವುದರ ಬಗ್ಗೆ ರೋಚಕ ಚರ್ಚೆ ನಡೆಯುತ್ತಿವೆ. ಮಗದೊಂದೆಡೆ ಜಯಲಲಿತಾ ಸಾವಿನಿಂದಾಗಿ ಎಷ್ಟು ಜನರು ಪ್ರಾಣಕಳೆದುಕೊಂಡರು ಎಂಬ ಬಗ್ಗೆ ಅಲ್ಲಿನ ಸರಕಾರ ಅಂಕಿ ಅಂಶ ನೀಡುತ್ತಿವೆ. ಎಟಿಎಂನ ಮುಂದೆ ಸತ್ತವರನ್ನೂ ಜಯಲಲಿತಾ ಅವರ ಖಾತೆಗೆ ಸೇರಿಸಿ, ತಮ್ಮ ನಾಯಕಿಯನ್ನು ವೈಭವೀಕರಿಸುವುದರಲ್ಲಿ ಮಗ್ನರಾಗಿದ್ದಾರೆ. ನೋಟುನಿಷೇಧ, ಜಯಲಲಿತಾ ಸಾವು ಹಾಗೂ ವಾರ್ದಾ ಚಂಡಮಾರುತದಿಂದಾಗಿ ಬದುಕಿದ್ದು ಸತ್ತ ಜನರ ಬಗ್ಗೆ ಯಾರೂ ಗಮನ ಹರಿಸುತ್ತಲೇ ಇಲ್ಲ. ಇದು ನಿಜಕ್ಕೂ ಆತಂಕಕಾರಿಯಾಗಿದೆ. ಜನರ ನೆರವಿಗೆ ಧಾವಿಸಬೇಕಾಗಿರುವ ಕೇಂದ್ರ ಸರಕಾರವಂತೂ, ತಮಿಳುನಾಡಿನ ಸದ್ಯದ ಕದಡಿದ ರಾಜಕೀಯದಲ್ಲಿ ಎಷ್ಟು ಮೀನು ಹಿಡಿಯಬಹುದು ಎಂಬ ಆಲೋಚನೆಯಲ್ಲಿದೆ. ಆದುದರಿಂದಲೇ ಅದು ದೂರದಿಂದಲೇ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಹತ್ತಿರ ಹೋಗಿ, ತಮಿಳರ ಕಷ್ಟ ಸುಖ ವಿಚಾರಿಸುವ ಹೃದಯವೈಶಾಲ್ಯ ಕೇಂದ್ರ ಸರಕಾರದ ಬಳಿಯೂ ಕಾಣುತ್ತಿಲ್ಲ. ಜನರಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸಬೇಕಾದ ತಮಿಳುನಾಡಿನ ಸಂಸದರೆಲ್ಲ ಜಯಲಲಿತಾ ಉತ್ತರಾಧಿಕಾರಿಯ ಬಗ್ಗೆ ಚಿಂತಿತರಾಗಿದ್ದಾರೆ. ನಿಜಕ್ಕೂ ತಮಿಳುನಾಡು ಸುನಾಮಿಯ ಸಂದರ್ಭದಲ್ಲೂ ಇಷ್ಟು ದುರ್ಬರ ಸ್ಥಿತಿಯನ್ನು ಎದುರಿಸಿರಲಿಲ್ಲವೇನೋ?

ಕೇಂದ್ರ ಸರಕಾರ ಎಲ್ಲ ರಾಜಕೀಯಗಳನ್ನು ಪಕ್ಕಕ್ಕಿಟ್ಟು ತಮಿಳುನಾಡಿನ ಒಟ್ಟು ಸ್ಥಿತಿಗೆ ಸ್ಪಂದಿಸಬೇಕಾದ ಅಗತ್ಯವಿದೆ. ಜೊತೆಗೆ ಮಾಧ್ಯಮಗಳು ಅಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಪಕ್ಕಕ್ಕಿಟ್ಟು ಜನಸಾಮಾನ್ಯರ ಸಂಕಟಗಳನ್ನು ದಿಲ್ಲಿಗೆ ರವಾನಿಸುವ ಕೆಲಸವನ್ನು ಮಾಡಬೇಕಾಗಿದೆ. ಜಯಲಲಿತಾ ಅಭಿಮಾನಿಗಳ ಹೆಣಗಳನ್ನು ಎಣಿಸುವ ಕೆಲಸದಲ್ಲಿ ನಿರತರಾಗಿರುವ ತಮಿಳುನಾಡಿನ ನಾಯಕರು, ಮೊದಲು ಸಾಯುವವರನ್ನು ಉಳಿಸುವ ಪ್ರಯತ್ನದ ಕಡೆಗೆ ಮನ ಮಾಡಬೇಕು. ಅದಕ್ಕಾಗಿ ಮೊತ್ತ ಮೊದಲು ಸರಕಾರವನ್ನು ಇನ್ನಷ್ಟು ಸುಭದ್ರಗೊಳಿಸಿ ಜನರ ಸಂಕಟಗಳಿಗೆ ಸ್ಪಂದಿಸಬೇಕು. ಜಯಲಲಿತಾ ಅವರಿಗೆ ಸಲ್ಲಿಸುವ ಅತ್ಯುತ್ತಮ ಶ್ರದ್ಧಾಂಜಲಿಯ ದಾರಿ ಇದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X