ಗಗನಯಾತ್ರಿ ಆಗಲಿದ್ದಾರೆ ಆಮಿರ್ ಖಾನ್ !
ಹೊಸ ಚಿತ್ರದ ಹೆಸರೇನು ಗೊತ್ತೇ ?

ಇದಲ್ಲದೆ ಇನ್ನೂ ಎರಡು ಚಿತ್ರಗಳು
ಮುಂಬೈ, ಡಿ.14: ಬಾಲಿವುಡ್ ನಟ ಆಮಿರ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ದಂಗಲ್ ಇನ್ನಷ್ಟೇ ಬಿಡುಗಡೆಯಾಗಬೇಕಿದೆ. ಆದರೆ ಇದೀಗ ಲಭ್ಯ ಮಾಹಿತಿಯಂತೆ ಆಮಿರ್ ಒಂದಲ್ಲ ಮೂರು ಚಿತ್ರಗಳ ಸ್ಕ್ರಿಪ್ಟ್ ಗೆ ಓಕೆ ಎಂದಿದ್ದಾರೆ. ಸಾಮಾನ್ಯವಾಗಿ ಒಂದು ಚಿತ್ರ ಮುಗಿಯದೆ ಇನ್ನೊಂದು ಚಿತ್ರಕ್ಕೆ ಕೈಹಾಕದ ಆಮಿರ್ ಪ್ರಪ್ರಥಮ ಬಾರಿ ಮೂರು ಚಿತ್ರಗಳಲ್ಲಿ ಬೆನ್ನು ಬೆನ್ನಿಗೆ ನಟಿಸಲಿದ್ದಾರೆ.
ಆಮಿರ್ ಅವರಿಗೆ ಆಸಕ್ತಿದಾಯಕ ಪಾತ್ರವಿರುವ ಅದ್ವೈತ್ ಚೌಹಾಣ್ ಅವರ ಸೀಕ್ರೆಟ್ ಸೂಪರ್ ಸ್ಟಾರ್ ಅವರ ಮುಂಬರುವ ಒಂದು ಸಿನಿಮಾ ಆದರೆ ಯಶ್ ರಾಜ್ ಫಿಂಸ್ ಸಂಸ್ಥೆಯ ಥಗ್ಸ್ ಆಫ್ ಹಿಂದುಸ್ಥಾನ್ 2018 ದೀಪಾವಳಿ ಹೊತ್ತಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಧೂಮ್-3 ಚಿತ್ರದ ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯಅವರದೇ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರೂ ಅಭಿನಯಿಸಲಿದ್ದಾರೆ. ಮೂರನೇ ಚಿತ್ರಭಾರತದ ಪ್ರಪ್ರಥಮ ಗಗನಯಾತ್ರಿ ರಾಕೇಶ್ ಶರ್ಮ ಅವರ ಜೀವನಾಧರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ರಾಕೇಶ್ ಶರ್ಮ ಪಾತ್ರಧಾರಿಯಾಗಲಿದ್ದಾರೆ ಆಮಿರ್.ಅಂದ ಹಾಗೆ ಈ ಚಿತ್ರಕ್ಕೆ ‘ಸಾರೇ ಜಹಾನ್ ಸೆ ಅಚ್ಛಾ’ ಎಂಬ ಹೆಸರಿಡಲಾಗಿದೆ.
1999ರಲ್ಲಿ ಭೋಪಾಲ್ ಎಕ್ಸ್ ಪ್ರೆಸ್ ಚಿತ್ರ ನಿರ್ದೇಶಿಸಿದ್ದ ಮಹೇಶ್ ಮಥಾಯಿ ಈ ಚಿತ್ರದ ನಿರ್ದೇಶಕರಾಗಲಿದ್ದಾರೆ. ಮೇಲಿನ ಶೀರ್ಷಿಕೆಯೊಂದಿಗೆ ಸೆಲ್ಯೂಟ್ ಎಂಬ ಶೀರ್ಷಿಕೆಯನ್ನೂ ಗಣನೆಗೆ ತೆಗೆದುಕೊಳ್ಳಲಾಗಿದ್ದರೂ ಅಂತಿಮವಾಗಿ ಸಾರೇ ಜಹಾನ್ ಸೆ ಅಚ್ಛಾ ಶೀರ್ಷಿಕೆಯೇ ಸೂಕ್ತವೆಂದು ನಿರ್ಧರಿಸಲಾಯಿತು.
ಗಗನಯಾತ್ರೆಯ ಸಂದರ್ಭ ಭಾರತ ಬಾಹ್ಯಾಕಾಶದಿಂದ ಹೇಗೆ ಕಾಣುತ್ತಿತ್ತು ಎಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ರಾಕೇಶ್ ಶರ್ಮ ಅವರನ್ನು ಪ್ರಶ್ನಿಸಿದ್ದಾಗ ಅವರು ‘ಸಾರೇ ಜಹಾನ್ ಸೆ ಅಚ್ಛಾ’ ಎಂದಿದ್ದರು. ಆದುದರಿಂದ ಈ ಶೀರ್ಷಿಕೆಗಿಂತ ಉತ್ತಮ ಹೆಸರು ಈ ಚಿತ್ರಕ್ಕೆ ಇಡಲು ಸಾಧ್ಯವಿಲ್ಲವೆಂದು ಚಿತ್ರದ ನಿರ್ಮಾಣ ಸಂಸ್ಥೆ ನಿರ್ಧರಿಸಿತ್ತು.







