ಪುತ್ತೂರು: ‘ಡಿ’ ವರ್ಗ ಸರ್ಕಾರಿ ನೌಕರರ ಸಂಘದ ಪುನಶ್ಚೇತನ ಸಭೆ

ಪುತ್ತೂರು, ಡಿ.14: ‘ಡಿ’ ವರ್ಗದ ಸರಕಾರಿ ನೌಕರರ ಸಂಘವು 2017ರಲ್ಲಿ 60ನೆ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಪುತ್ತೂರು ಸಂಘವನ್ನು ಪುನಶ್ಚೇತನಗೊಳಿಸಲು ಮಂಗಳವಾರ ಜಿಲ್ಲಾ ಸಂಘದಿಂದ ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಸಭೆ ನಡೆಸಲಾಯಿತು.
ಸಭೆಯ ಅಧ್ಯಕ್ಷೆ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ವೌರಿಸ್ ಮಸ್ಕರೇನ್ಹಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಟನೆಯನ್ನು ಬಲಪಡಿಸುವ ಕುರಿತು ಮಾಹಿತಿ ನೀಡಿದರು.
ಡಿ ಗ್ರೂಪ್ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಫ್ರಾನ್ಸಿಸ್ ಫ್ರಾಂಕ್ಲೀನ್ ಕುಟಿನ್ಹಾ ಪ್ರಾಸ್ತಾವಿಕಾವಾಗಿ ಮಾತನಾಡಿದರು. ಡಿ ಗ್ರೂಪ್ ನೌಕರ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಹೆಗ್ಡೆ. ಕರ್ನಾಟಕ ರಾಜ್ಯ ವಾಹನ ಚಾಲಕರ ಸಂಘದ ಪುತ್ತೂರು ಘಟಕದ ಅಧ್ಯಕ್ಷ ಸೀತಾರಾಮ, ಡಿ ಗ್ರೂಪ್ ನೌಕರರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಉದಯ ರಂಜನ್, ಮಹಿಳಾ ಪ್ರತಿನಿಧಿ ಸುಶೀಲಾ, ಮಾಜಿ ಉಪಾದ್ಯಕ್ಷ ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿ ಯು.ಕೆ.ನಾರಾಯಣ, ಗೌರವ ಅಧ್ಯಕ್ಷ ವಾಮಯ್ಯ ನಾಯ್ಕ ಉಪಸ್ಥಿತರಿದ್ದರು.
ಡಿ ಗ್ರೂಪ್ ನೌಕರರ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಎ.ವಸಂತ ನಾಯ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.





