Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಮ್ಮ ನಿಧನರಾದಾಗ ರಜೆಕೇಳಿದ ಆದಿವಾಸಿ...

ಅಮ್ಮ ನಿಧನರಾದಾಗ ರಜೆಕೇಳಿದ ಆದಿವಾಸಿ ಕಂಡಕ್ಟರ್‌: ರಾಜ್ಯದ ಹೊರಗೆ ಡ್ಯೂಟಿ ಹಾಕಿದ ಕೆಎಸ್ಸಾರ್ಟಿಸಿ

ವಾರ್ತಾಭಾರತಿವಾರ್ತಾಭಾರತಿ14 Dec 2016 1:56 PM IST
share
ಅಮ್ಮ ನಿಧನರಾದಾಗ ರಜೆಕೇಳಿದ ಆದಿವಾಸಿ ಕಂಡಕ್ಟರ್‌: ರಾಜ್ಯದ ಹೊರಗೆ ಡ್ಯೂಟಿ ಹಾಕಿದ ಕೆಎಸ್ಸಾರ್ಟಿಸಿ

ಕಾಸರಗೋಡು, ಡಿ. 14: ಅಮ್ಮ ನಿಧನರಾಗಿದ್ದರಿಂದ ರಜೆಕೇಳಿದ ಕೆಎಸ್ಸಾರ್ಟಿಸಿ ನಿರ್ವಾಹಕನಿಗೆ ರಾಜ್ಯದ ಹೊರಗೆ ಡ್ಯೂಟಿ ಹಾಕಿದ ಸಖೇದಾಶ್ಚರ್ಯದ ಘಟನೆ ವರದಿಯಾಗಿದೆ. ಪನತ್ತಡಿ ಚಾಮುಂಡಿಕುನ್ನ್ ಎಂಬಲ್ಲಿನ ಆದಿವಾಸಿ ವ್ಯಕ್ತಿಯಾದ ಟಿ.ವೇಣುಗೆ ಇಲಾಖೆಯಿಂದ ಈ ಅನುಭವವಾಗಿದೆ.ಕಳೆದ ನವೆಂಬರ್ 12ಕ್ಕೆ ವೇಣುರ ಅಮ್ಮ ಯಶೋದಾಬಾಯಿ ನಿಧನರಾಗಿದ್ದರು. ಎಂಡೋಸಲ್ಫಾನ್ ಪೀಡಿತೆ ಮತ್ತು ಮೂರುವರ್ಷಗಳಿಗಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಯಶೋದಬಾಯಿ ನವೆಂಬರ್ 12 ಸೋಮವಾದಂದು ಬೆಳಗ್ಗೆ ಕೊನೆಯುಸಿರೆಳಿದಿದ್ದರು. ರವಿವಾರ 8:30ಕ್ಕೆ ಕಾಸರಗೋಡು ಡಿಪ್ಪೊದಲ್ಲಿ ಡ್ಯೂಟಿಗೆ ಬಂದಿದ್ದ ವೇಣು ಅವರ ಕೆಲಸ ಸೋಮವಾರ ಬೆಳಗ್ಗೆ ಹತ್ತುಗಂಟೆಗೆ ಕೊನೆಗೊಂಡಿತ್ತು. ಆಫೀಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಸಮಯದಲ್ಲಿ ಅಮ್ಮನ ಅಸೌಖ್ಯದ ಸುದ್ದಿ ವೇಣುಗೆ ತಿಳಿದು ಬಂದಿತ್ತು. ಕೂಡಲೇ ಮನೆಗೆ ಬರಬೇಕೆಂದು ಸಂಬಂಧಿಕರುವೇಣುಗೆ ಫೋನ್ ಮಾಡಿದ್ದರು. ವಿಷಯವನ್ನು ಸ್ಟೇಶನ್ ಮಾಸ್ಟರ್ ಮತ್ತು ಕಂಟ್ರೋಲಿಂಗ್ ಇನ್ಸ್‌ಪೆಕ್ಟರ್‌ಗೆ ತಿಳಿಸಿದರು ಬದಲಿ ಕಂಡಕ್ಟರ್‌ನನ್ನು ನೀನೇ ಏರ್ಪಾಟು ಮಾಡಬೇಕು ಎಂದು ಮೇಲಧಿಕಾರಿಗಳು ಉತ್ತರಿಸಿ ವೇಣುವನ್ನು ವ್ಯಂಗ್ಯಮಾಡಿದ್ದರು ಎಂದು ವೇಣು ಹೇಳುತ್ತಿದ್ದಾರೆ.

ರಜೆ ನಿರಾಕರಿಸಿದ್ದಲ್ಲದೆ ವೇಣುಗೆ ಮಂಗಳೂರಿಗೆ ಡ್ಯೂಟಿ ಹಾಕಲಾಯಿತು. ಬಸ್ ಮಂಗಳೂರಿನ ತೊಕ್ಕೊಟ್ಟು ತಲುಪಿದಾಗ ಅಮ್ಮ ನಿಧನರಾಗಿದ್ದಾರೆ. ಮೃತದೇಹವವನ್ನು ಏನು ಮಾಡಬೇಕೆಂದು ಸಂಬಂಧಿಕರು ಕೇಳಿದರು. ತಾನು ಬಂದ ಬಳಿಕ ಮೃತದೇಹ ತೆಗೆದರೆ ಸಾಕೆಂದು ವೇಣು ಹೇಳಿದರು. ಬಸ್ ಮಂಗಳೂರಿನಿಂದ ಮರಳಿಕಾಸರಗೋಡಿಗೆ ಬಂದಿದ್ದರು. ಬಸ್ ಚಾಲಕ ವೇಣುವಿನ ಮನೆ 65ಕಿ.ಮೀ. ದೂರದಲ್ಲಿದೆ ಅವರಿಗೆ ಮನೆಗೆ ಹೋಗಲು ಕೆಎಸ್ಸಾರ್ಟಿಸಿಯ ಕಚೇರಿ ವಾಹನ ಕೊಡಬೇಕೆಂದು ವಿನಂತಿಸಿದರೂ ಮೇಲಧಿಕಾರಿಗಳು ಕೊಡಲಿಲ್ಲ.

 ಹೀಗೆ ಸಂಜೆ ಆರುಗಂಟೆಗೆ ವೇಣು ಮನೆಗೆ ತಲುಪಿದ್ದರು. ಆನಂತರವೇ ಅವರ ಅಮ್ಮನ ಶವಸಂಸ್ಕಾರ ನಡೆದಿತ್ತು. ವೇಣುನ ಪತ್ನಿಯ ತಂದೆ ಮತ್ತು ಕಾಂಙಂಗಾಡ್ ಎಎಸ್ಸಾರ್ಟಿಸಿ ನೌಕರ ಬಾಲಕೃಷ್ಣರಿಗೂರಜೆ ನಿರಾಕರಿಸಲಾಗಿತ್ತು. ಅದೇವೇಳೆ ವೇಣು ಸಹೋದರ ಎ.ಆರ್. ಕ್ಯಾಂಪ್‌ನ ಪೊಲೀಸ್ ದಾಮೋದರನಿಗೆ ತಾಯಿ ನಿಧನ ಸುದ್ದಿ ತಿಳಿದಾಗ ಪೊಲೀಸ್ ವಾಹನದಲ್ಲಿ ಅವರನ್ನು ಮನೆಗೆ ತಲುಪಿಸಲಾಗಿತ್ತು.

 ಪನತ್ತಡಿ ಪ್ಲಾಂಟೇಶನ್ ಸಮೀಪದಲ್ಲಿ ಯಶೋದಾಬಾಯಿ ಮನೆಯಿದೆ. ಎಂಡೊಸಲ್ಫಾನ್ ಪೀಡಿತೆಯಾಗಿದ್ದರೂ ಮೆಡಿಕಲ್ ಕ್ಯಾಂಪ್‌ನಲ್ಲಿ ಭಾಗವಹಿಸದ್ದರಿಂದ ಎಂಡೊ ಬಲಿಪಶುಗಳ ಪಟ್ಟಿಯಲ್ಲಿ ಅವರ ಹೆಸರಿರಲಿಲ್ಲ. ಹೃದ್ರೋಗ ಇದ್ದುದರಿಂದ ಅವರಿಗೆ ಶಸ್ತ್ರಕ್ರಿಯೆಯನ್ನೂ ಮಾಡಿರಲಿಲ್ಲ. ಈಗ ವೇಣು ತನ್ನೊಂದಿಗೆ ತೋರಿಸಲಾದ ಅನ್ಯಾಯದ ವಿರುದ್ಧ ದೂರು ಸಲ್ಲಿಸಲು ಯೂನಿಯನ್‌ನೊಂದಿಗೆ ಸಮಾಲೋಚಿಸುತ್ತಿದ್ದೇನೆ ಎಂದು ವೇಣು ಹೇಳಿದ್ದಾರೆ.

ಆದರೆ, ವೇಣುಗೆ ರಜೆ ನೀಡಿದ್ದೇವೆ. ಅಮ್ಮನ ಮೃತದೇಹ ಸಂಸ್ಕಾರ ಕ್ರಿಯೆಯಲ್ಲಿ ವೇಣು ಭಾಗವಹಿಸಿದ್ದಾರೆ ಎಂದು ಕೆಎಸ್ಸಾರ್ಟಿಸಿ ಸ್ಟೇಶನ್ ಮಾಸ್ಟರ್‌ರ ಆಫೀಸ್‌ನಿಂದ ಪ್ರತಿಕ್ರಿಯೆ ದೊರಕಿದೆ. ಇಂತಹ ಘಟನೆಯಾದಾಗ ರಜೆ ನಿರಾಕರಿಸುವ ರೂಢಿಯಿಲ್ಲ. ಮಾನವೀಯ ನೆಲೆಯಲ್ಲಿನಿಲುವನ್ನು ಕೈಗೊಳ್ಳಲಾಗುತ್ತದೆ ಎಂದು ಕಚೇರಿ ಮೂಲಗಳು ಹೇಳಿವೆ ಎಂದು ವರದಿತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X