ಗೂನಡ್ಕ: ‘ಸೂರಿಲ್ಲದವರಿಗೆ ಸೂರು’ ಸಾಂತ್ವನ ಯೋಜನೆಗೆ ಚಾಲನೆ

ಸುಳ್ಯ, ಡಿ.14: ‘ಸೂರಿಲ್ಲದವರಿಗೆ ಸೂರು’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರಾರಂಭಗೊಂಡಂತಹ ‘ಸಾಂತ್ವನ ಯೋಜನೆ’ ವಾಟ್ಸಾಪ್ ಬಳಗದ ಪ್ರಥಮ ಫಲಾನುಭವಿಯ ಮನೆಗೆ ಶಿಲಾನ್ಯಾಸ ಕಾರ್ಯಕ್ರಮವು ಸಂಪಾಜೆಯ ಗೂನಡ್ಕದಲ್ಲಿ ಜರಗಿತು.
ವಾಟ್ಸಾಪ್ ಬಳಗದ ದಾನಿಗಳಿಂದ ಸಂಗ್ರಹಗೊಂಡಂತಹ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಮನೆಗೆ ಗೂನಡ್ಕದ ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬ್ದುಲ್ಲ ಸಖಾಫಿ ಅಡಿಗಲ್ಲು ಹಾಕಿದರು.
ಸಂಪಾಜೆ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಪಿ.ಜಗದೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ವಕ್ಫ್ ಮಂಡಳಿಯ ನಿರ್ದೇಶಕ ಮುಹಮ್ಮದ್ ಕುಂಞಿ ಗೂನಡ್ಕ, ಗ್ರಾಪಂ ಸದಸ್ಯ ಜಿ.ಕೆ.ಹಮೀದ್, ಗುತ್ತಿಗೆದಾರ ಎಚ್.ಎ.ಅಶ್ರಫ್ ಬಾಲೆಂಬಿ ಸಾಂತ್ವನ ಯೋಜನೆಗೆ ಶುಭ ಹಾರೆೃಸಿದರು.
ಸದರ್ ಮುಅಲ್ಲಿಂ ಹಬೀಬ್ ಹಿಮಮಿ, ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಎಂ.ಬಿ.ಇಬ್ರಾಹೀಂ, ಮಾಜಿ ಅಧ್ಯಕ್ಷ ಹಾಜಿ ಪಿ.ಎ.ಉಮರ್, ಹಿರಿಯರಾದ ಅಬ್ದುರ್ರಝಾಕ್, ಯೋಜನೆಯ ಪ್ರಥಮ ಫಲಾನುಭವಿ ಅಬ್ದುಲ್ಲತೀಫ್ ಉಪಸ್ಥಿತರಿದ್ದರು.
ಸಾಂತ್ವನ ಯೋಜನೆ ವಾಟ್ಸಾಪ್ ಬಳಗದ ಅಡ್ಮಿನ್ ಡಾ.ಉಮರ್ ಬೀಜದಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿ.ಕೆ.ಅಬೂಸಾಲಿ ವಂದಿಸಿದರು. ಶೌವಾದ್ ಗೂನಡ್ಕ ಹಾಗೂ ಅಬ್ದುಲ್ ಜಾವೇದ್ ಕಾರ್ಯಕ್ರಮ ನಿರೂಪಿಸಿದರು.







