ಶ್ರೀನಿಧಿ ರಮೇಶ್ ಶೆಟ್ಟಿಗೆ ನಾಗರಿಕ ಸನ್ಮಾನ

ಮುಲ್ಕಿ, ಡಿ.14: ಕಠಿನ ಪರಿಶ್ರಮ, ಪಯತ್ನ, ಗುರು ಹಿರಿಯರ ಆಶೀರ್ವಾದ, ದೈವ ದೇವರುಗಳ ಕೃಪೆ, ಕುಟುಂಬವರ್ಗದ ಸಹಕಾರದಿಂದ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ನನ್ನ ಗೆಲು ವು ತುಳುನಾಡಿಗೆ ಸಂದ ಗೌರವವಾಗಿದೆ ಎಂದು ಮಿಸ್ ಸುಪ್ರ ನ್ಯಾಷನಲ್ ಪ್ರಶಸ್ತಿ ವಿಜೇತೆ ತಾಳಿಪಾಡಿಗುತ್ತು ಶ್ರೀನಿಧಿ ರಮೇಶ್ ಶೆಟ್ಟಿ ಹೇಳಿದರು.
ಪೋಲ್ಯಾಂಡ್ ನಡೆದ ‘ಮಿಸ್ ಸುಪ್ರ ನ್ಯಾಶನಲ್ 2016’ರಲ್ಲಿ ವಿಜೇತರಾದ ಶ್ರೀನಿಧಿ ರಮೇಶ್ ಶೆಟ್ಟಿಯವರಿಗೆ ಕಿನ್ನಿಗೋಳಿ ರಾಜಾಂಗಣದಲ್ಲಿ ಕಿನ್ನಿಗೋಳಿಯ ನಾಗರಿಕರ ಹಾಗೂ ತಾಳಿಪಾಡಿಗುತ್ತು ಕಟುಂಬಿಕರ ವತಿಯಿಂದ ಹುಟ್ಟೂರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.
ಇದೇ ವೇಳೆ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದಲೂ ಶ್ರೀನಿಧಿ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಸಂಸದ ನಳಿನ್ ಕುಮಾರ್, ಮುಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲು ದೇವಳ ಪ್ರಧಾನ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತ ಪಧ್ಮನಾಭ ಆಸ್ರಣ್ಣ ಶುಭಹಾರೈಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ, ಮಾಜಿ ಶಾಸಕ ಕೆ. ಅಮರನಾಥ ಶೆಟ್ಟಿ, ಮೂಡಬಿದಿರೆ ಆಳ್ವಾಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ, ಮುಂಬಯಿ ಉದ್ಯಮಿ ವಿರಾರ್ ಶಂಕರ್ ಶೆಟ್ಟಿ, ಮುಂಬಯಿ ಪೋಲಿಸ್ ಅಧಿಕಾರಿ ಪ್ರಕಾಶ್ ಭಂಡಾರಿ, ದೋಹ ಕತಾರ್ ಬಂಟ್ ಸಂಘದ ಅಧ್ಯಕ್ಷ ರವಿ ಶೆಟ್ಟಿ , ರಮೇಶ್ ಶೆಟ್ಟಿ, ತಾಳಿಪಾಡಿಗುತ್ತು ಧನಪಾಲ್ ಶೆಟ್ಟಿ, ತಾಳಿಪಾಡಿ ಗುತ್ತು ಭಾಸ್ಕರ ಶೆಟ್ಟಿ, ತಾಳಿಪಾಡಿ ಗುತ್ತು ಸುಕುಮಾರ್ ಶೆಟ್ಟಿ, ಸುರೇಶ್ ಶೆಟ್ಟಿ ಪುಚ್ಚಾಡಿ, ಕೆ. ಸೀತಾರಾಮ ಶೆಟ್ಟಿ ಕಿನ್ನಿಗೋಳಿ, ಪಂಜದ ಗುತ್ತು ಶಾಂತಾರಾಮ ಶೆಟ್ಟಿ, ತಾಳಿಪಾಡಿಗುತ್ತು ಶೋಭಾ ಶೆಟ್ಟಿ, ಯುಗಪುರುಷದ ಕೆ. ಭುವನಾಭಿರಾಮ ಉಡುಪ, ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ಕುಮಾರ್ ಹೆಗ್ಡೆ, ಸಾಯಿನಾಥ್ ಶೆಟ್ಟಿ, ಉಪನ್ಯಾಸಕಿ ಸುಧಾರಾಣಿ ಶೆಟ್ಟಿ, ದಿವಾಕರ ಕರ್ಕೇರಾ, ಪತ್ರಕರ್ತ ಶರತ್ ಶೆಟ್ಟಿ ಮತ್ತಿತರರಿದ್ದರು.







