ದೀನೀ ಚೌಕಟ್ಟು ಮೀರುವ ಧಾಮಿ೯ಕ ಆಚರಣೆಗಳಿಗೆ ಬ್ಯಾರಿ ಜಮಾತ್ ದಾರಿ ದೀಪವಾಗಲಿ :ಜುನೈದಿ ಜಿಫ್ರಿ ತಂಙಳ್

ಬೆಂಗಳೂರು,ಡಿ.14: “ಇಸ್ಲಾಮೀ ಚೌಕಟ್ಟನ್ನು ಮೀರಿ ರಾಜ್ಯದ ವಿವಿಧ ನಗರಗಳಲ್ಲಿ ನಡೆಯುವ ಧಾಮಿ೯ಕ ಆಚರಣೆಗಳಿಗೆ ಬ್ಯಾರಿ ಜನಾಂಗ ಆಚರಿಸುವ ಮೀಲಾದ್ ಮಾಗ೯ದಶಿ೯ಯಾಗಬೇಕು” ಎಂದು ಆತೂರು ಮುದರ್ರಿಸ್ ಮೌಲಾನಾ ಜುನೈದ್ ಜಿಫ್ರಿ ತಂಙಳ್ ಹೇಳಿದರು.
ಬೆಂಗಳೂರು ಬ್ಯಾರಿ ಜಮಾತ್ ಮತ್ತು ಬ್ಯಾರಿ ಇಲ್ಮ್ ಸೆಂಟರ್ ಇದರ ವತಿಯಿಂದ ಅರ್.ಟಿ.ನಗರ ಬಳಿಯ ಕನಕ ನಗರದ ಆರ್.ಕೆ ಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಈದ್ ಮೀಲಾದ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಸ್ಲಾಮೀ ಹಬ್ಬಗಳ ಆಚರಣೆಗಳು ಇಸ್ಲಾಮಿನ ನೈಜ ಚೌಕಟ್ಟನ್ನು ಮೀರುತ್ತಿದ್ದು ಇದು
ಅನ್ಯ ಧಮೀಯ೯ಯರಿಗೆ ಇಸ್ಲಾಮಿನ ಬಗ್ಗೆ ತಪ್ಪು ಕಲ್ಪನೆಗೆ ಅವಕಾಶವಾಗುವುದು ಮಾತ್ರವಲ್ಲ ಸುನ್ನೀ ಆದಶ೯ವನ್ನು ಪ್ರಶ್ನಿಸುವ ಬಿದಯೀ ಗುಂಪುಗಳಿಗೆ ಸದವಕಾಶ ಒದಗಿಸಿದಂತಾಗುತ್ತದೆ. ಧಾಮಿ೯ಕವಾಗಿ ಸಂಪನ್ನರಾಗಿರುವ ಬ್ಯಾರಿ ಮತ್ತು ಮಲಬಾರಿಗಳು ಇಸ್ಲಾಮಿನ ನೈಜ ಆದಶ೯ವನ್ನು ಸಮಾಜದ ಮುಂದೆ ನೆಲೆನಿಲ್ಲಿಸುವರೇ ಶಕ್ತವಾದ ಕ್ರಮದೊಂದಿಗೆ ಮುನ್ನಡೆಯಬೇಕೆಂದು ಅವರು ಕರೆ ನೀಡಿದರು.
ಬ್ಯಾರಿ ಜಮಾತ್ ಅಧ್ಯಕ್ಷ ಎ.ಬಿ.ಮುಹಮ್ಮದ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸ್ಥಳೀಯ ಸುಲ್ತಾನ್ ಮಸ್ಜಿದ್ ಇಮಾಮ್ ಮೌಲಾನಾ ಇಖ್ರಾರ್ ಅಹ್ಮದ್, ಜಮಾತ್ ಪ್ರಮುಖರಾದ ಹೈದರ್ ಹಾಜಿ ಜೋಕಟ್ಟೆ, ಅಬ್ದುಲ್ ಹಕೀಮ್, ಇಬ್ರಾಹೀಮ್ ಇನೋಳಿ, ಸವಾದ್ ಮುಹಮ್ಮದ್ ಕುಂಞಿ, ಡಾ. ಅಬ್ದುಲ್ ಹಮೀದ್ ತೋಡಾರು, ಅಹ್ಮದ್ ಶೆರೀಫ್ ವಗ್ಗ, ಹೈದರ್ ಭ್ರೈಟ್ ಚಿಕ್ಕಮಗಳೂರು ಮುಂತಾದವರು ಭಾಗವಹಿಸಿದ್ದರು.
ಜಮಾತ್ ಕಾಯ೯ದಶಿ೯ ಇಬ್ರಾಹೀಮ್ ಎ. ಜೊಕಟ್ಟೆ ಸ್ವಾಗತಿಸಿದರು, ಮುಹಮ್ಮದ್ ಕೊಡ್ಲಿಪೇಟೆ ವಂದಿಸಿದರು. ಜಮಾತ್ ಕಾಯ೯ದಶಿ೯ ಮುಹಮ್ಮದ್ ಹುಸೈನ್ ಸಿರಾಜ್ ಕಾಯ೯ಕ್ರಮ ನಿವ೯ಹಿಸಿದ್ದರು.







