ಕಣ್ಣೂರು ನಡುಪಳ್ಳಿ ಅಭಿವೃದ್ಧಿಗೆ 1 ಕೋ.ರೂ.: ಲೊಬೊ

ಮಂಗಳೂರು, ಡಿ.14: ನಗರ ಹೊರವಲಯದ ಕಣ್ಣೂರು ನಡುಪಳ್ಳಿ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ 1 ಕೋ.ರೂ.ವನ್ನು ಮಂಜೂರು ಮಾಡಿಸಿದ ಶಾಸಕ ಜೆ.ಆರ್.ಲೋಬೊ, ಶಾಸಕರ ನಿಧಿಯಿಂದ 10 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದರು.
ಮೀಲಾದುನ್ನಬಿ ಪ್ರಯುಕ್ತ ಕಣ್ಣೂರು ಬದ್ರಿಯಾ ಜುಮಾ ಮಸೀದಿಗೆ ಭೇಟಿ ನೀಡಿದ ಬಳಿಕ ಅವರು ಮಾತನಾಡುತ್ತಿದ್ದರು. ಈ ಸಂದರ್ಭ ಕಾಂಗ್ರೆಸ್ ವಾರ್ಡ್ ಅಧ್ಯಕ್ಷ ರಫೀಕ್ ಕಣ್ಣೂರು, ಹಮೀದ್ ಕಣ್ಣೂರು, ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್, ಹಾಜಿ ಹಮೀದ್, ಮುಹಮ್ಮದ್, ಶರೀಫ್, ಇಕ್ಬಾಲ್ ಉಪಸ್ಥಿತರಿದ್ದರು.
ಬಳಿಕ ಶಾಸಕರು ಬಜಾಲ್ ಕಟ್ಟಪುಣಿ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಳ್ಳುತ್ತಿರುವ ಕಾಮಗಾರಿಯನ್ನು ವೀಕ್ಷಿಸಿದರು. ಈ ಸಂದರ್ಭ ಕಾರ್ಪೊರೇಟರ್ ಸುಮಯ್ಯಿ, ವಾರ್ಡ್ ಅಧ್ಯಕ್ಷ ಭರತೇಶ್ ಅಮೀನ್, ಅಶ್ರಫ್ ಬಜಾಲ್, ಜ್ಯೋತಿ ಅಶೋಕ್, ಗಂಗಮ್ಮ, ಆನಂದ್ ರಾವ್, ದೇವದಾಸ್ ಮೇಲಾಂಟ, ಮಜೀದ್, ಅಬ್ದುಲ್ ದಾಯಿ ಉಪಸ್ಥಿತರಿದ್ದರು.
Next Story





