ಟ್ರೆಕ್ಕಿಂಗ್ ನಲ್ಲಿ ಜಾರಿದ ಮಗನನ್ನು ಉಳಿಸಲಾಗದ ತಂದೆ ಮಾಡಿದ್ದೇನು ?
.jpg)
ಜೆರುಸಲೇಂ, ಡಿ. 14: ಕಮರಿಯೊಂದಕ್ಕೆ ಮಗ ಜಾರಿ ಬೀಳುತ್ತಿರುವುದನ್ನು ನೋಡಿದ ವ್ಯಕ್ತಿಯೊಬ್ಬರು ಆತನನ್ನು ರಕ್ಷಿಸುವುದಕ್ಕಾಗಿ ತಾನೂ ಬಿದ್ದು ಮೃತಪಟ್ಟ ಘಟನೆ ಇಸ್ರೇಲ್‌ನಲ್ಲಿ ಶುಕ್ರವಾರ ನಡೆದಿದೆ.
ಒಮ್ರಿ ನೀರ್ ಮತ್ತು ಅವರ 10 ವರ್ಷದ ಮಗ ಇಲಾಹಿ ತಂಡವೊಂದರ ಜೊತೆ ಡೆಡ್ ಸಮೀಪದಲ್ಲಿರುವ ಜೂಡಿಯನ್ ಮರುಭೂಮಿಯಲ್ಲಿರುವ ಕಡಿದಾದ ದಿಬ್ಬಗಳನ್ನು ಏರಲು ಹೋಗಿದ್ದರು.
ಒಂದು ಸ್ಥಳದಲ್ಲಿ ಇಳಿಯುತ್ತಿದ್ದಾಗ ಬಾಲಕನು ಆಯ ತಪ್ಪಿ ತಂದೆಯ ಮೇಲೆ ಬಿದ್ದನು.
ಬಾಲಕನು ತನ್ನ ಸಮೀಪ ಬಂದಾಗ ತಂದೆ ಆತನನ್ನು ಹಿಡಿದುಕೊಂಡರು. ನೆಲಕ್ಕೆ ಅಪ್ಪಳಿಸುವಾಗ ಮಗನಿಗೆ ಪೆಟ್ಟಾಗದಂತೆ ಆಸರೆಯಾಗುವುದಕ್ಕಾಗಿ ಮಗನೊಂದಿಗೆ ತಂದೆಯೂ ಬಿದ್ದರು ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ.
50 ವರ್ಷದ ಪ್ರೊಫೆಸರ್ ತಂದೆ ಸ್ಥಳದಲ್ಲೇ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿದ್ದ ಮಗನನ್ನು ಹೆಲಿಕಾಪ್ಟರ್‌ನಲ್ಲಿ ಬೀರ್‌ಶೆಬ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತು. ಅಲ್ಲಿ ಆತ ರವಿವಾರ ಕೊನೆಯುಸಿರೆಳೆದನು.
ಬಾಲಕನ ಹೃದಯ ಮತ್ತು ಇತರ ಪ್ರಮುಖ ಅಂಗಗಳನ್ನು ನಾಲ್ವರು ಮಕ್ಕಳಿಗೆ ದಾನ ಮಾಡಲಾಗಿದೆ.





