ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಮುಷ್ಠಿಕಾಣಿಕೆ ಸಮರ್ಪಣೆ

ಮೂಡುಬಿದಿರೆ,ಡಿ.14: ಪುನರ್ ನವೀಕರಣಗೊಂಡು ಮುಂದಿನ ಮೇ ತಿಂಗಳಲ್ಲಿ ಬ್ರಹ್ಮಕಲಶೋತ್ಸವ ನಡೆಯುವ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಲ್ಲಿ ಪವಮಾನ ಕಲಶ ಬಳಿಕ ಮುಷ್ಠಿಕಾಣಿಕೆ ಸಮರ್ಪಣೆ ನಂತರ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಿತು.
ಪೂರ್ವಾಹ್ನ ಎಡಪದವು ಮುರಳೀಧರ್ ತಂತ್ರಿ ನೇತ್ರತ್ವದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ದತ್ತಾತ್ರೇಯ ಭಟ್ ಉಪಸ್ಥಿತಿಯಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ಬಳಿಕ ಬ್ರಹ್ಮಕಲಶೋತ್ಸವಕ್ಕೆ ಮೂಲಧನವಾಗಿ ದೇವಳಕ್ಕೆ ಮುಷ್ಠಿಕಾಣಿಕೆ ಸಮರ್ಪಿಸಿದರು.
ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ಯಾಮ ಹೆಗ್ಡೆ, ಬೆಂಗಳೂರು ಹೆಗ್ಗಡೆ ಸಂಘದ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ, ಕಾರ್ಯದರ್ಶಿ ಯೋಗೀಶ್ ಹೆಗ್ಡೆ, ದ.ಕ ಜಿಲ್ಲಾ ಹೆಗ್ಗಡೆ ಮಹಿಳಾ ಸಂಘದ ಕಾರ್ಯದರ್ಶಿ ಅಪರ್ಣಾ ಪಿ. ಹೆಗ್ಡೆ ಸಮಾಜದ ಹಿರಿಯರಾದ ಸೂರ್ಯಣ್ಣ ಹೆಗ್ಡೆ, ಬಾಬುರಾಯ ಹೆಗ್ಡೆ, ಸುಂದರ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
Next Story





