ಸಿಬಿಎಸ್‌ಇ ಶಾಲೆಗಳಲ್ಲಿ ಇನ್ನು ಕರೆನ್ಸಿ ರಹಿತ ಹಣಕಾಸು ವ್ಯವಹಾರ

ಹೊಸದಿಲ್ಲಿ, ಡಿಸೆಂಬರ್ 14: ಸಿಬಿಎಸ್‌ಇ(ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಶನ್) ಸ್ಕೂಲ್‌ಗಳ ಸಂಪೂರ್ಣ ಹಣಕಾಸು ವ್ಯವಹಾರಗಳು ಕರನ್ಸಿ ರಹಿತವಾಗಿರಬೇಕೆಂದು ಮಂಡಳಿ ಸೂಚನೆ ರವಾನಿಸಿದೆ.ಶುಲ್ಕ ಪಡೆಯುವುದು, ಅಧ್ಯಾಪಕರಿಗೆ ಮತ್ತು ಇತರ ಉದ್ಯೋಗಿಗಳಿಗೆ ಸಂಬಳ ನೀಡುವುದು ಸಹಿತ ಎಲ್ಲ ಹಣಕಾಸು ವ್ಯವಹಾರಗಳು ಜನವರಿಯಿಂದ ಕರೆನ್ಸಿ ರಹಿತವಾಗಿರಲಿದೆ ಎಂದು ವರದಿಯಾಗಿದೆ.
ಶಾಲಾ ಶುಲ್ಕ,ಪರೀಕ್ಷಾ ಶುಲ್ಕ ಮುಂತಾದ ಎಲ್ಲಾ ಶುಲ್ಕಗಳು ಆನ್‌ಲೈನ್ ಮೂಲಕ, ಚೆಕ್ ಮೂಲಕವೇ ಸ್ವೀಕರಿಸಬೇಕಿದೆ. 2017 ಜನವರಿಯಿಂದ ಆರಂಭವಾಗಲಿರುವ ತ್ರೈಮಾಸದಿಂದ ಇದು ಜಾರಿಗೆ ತರಬೇಕೆಂದು ಸಿಬಿಎಸ್‌ಇ ಅಫಿಲಿಯೇಟೆಡ್ ಸ್ಕೂಲ್‌ಗಳಿಗೆ ನೀಡಲಾದ ಸೂಚನೆಯಲ್ಲಿ ಹೇಳಲಾಗಿದೆ.
ಸಂಬಳ ನೀಡುವುದಲ್ಲದೆ ಸ್ಕೂಲ್‌ಗಳಿಗೆ ಅವಶ್ಯಕವಾದ ವಸ್ತುಗಳನ್ನು ಪಡೆಯಲು ಮತ್ತು ಇತರ ವ್ಯವಹಾರಗಳನ್ನು ಬ್ಯಾಂಕ್ ಮೂಲಕವೇ ನಡೆಸಬೇಕಾಗಿದೆ. ಅಧ್ಯಾಪಕ-ರಕ್ಷಕರ ಸಭೆಯಲ್ಲಿ ಕರೆನ್ಸಿ ರಹಿತ ಮಾರ್ಗಗಳಲ್ಲಿ ಹಣಕಾಸು ವ್ಯವಹಾರ ನಡೆಸಬೇಕಿದೆ. ಇದರ ಲಾಭಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚನೆ ನೀಡಲಾಗಿದೆ.
ಕರೆನ್ಸಿರಹಿತ ವ್ಯವಹಾರಗಳ ಪ್ರಯೋಜನದ ಕುರಿತು ನೆರೆಹೊರೆ ಮಂದಿಯಲ್ಲಿ ಜಾಗೃತಿ ಮೂಡಿಸಬೇಕು. ಹಿರಿಯ ಕ್ಲಾಸಿನ ಮಕ್ಕಳನ್ನು ಇದಕ್ಕಾಗಿ ಬಳಸಬೇಕು. ಸೆಮಿನಾರ್‌ಗಳು, ಉಪನ್ಯಾಸ ರಚನೆ, ಭಾಷಣ ಸ್ಪರ್ಧೆ ಮುಂತಾದುವುಗಳನ್ನು ಶಾಲೆಗಳಲ್ಲಿ ಏರ್ಪಡಿಸಲು ಸಿಬಿಎಸ್ ಇ ಮಂಡಳಿಸೂಚಿಸಿದೆ.







