ಮಾಂಜಾಕ್ಕೆ ಮಧ್ಯಂತರ ನಿಷೇಧ

ಹೊಸದಿಲ್ಲಿ,ಡಿ.14: ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ವು ಗಾಳಿಪಟಗಳನ್ನು ಹಾರಿಸಲು ಬಳಸುವ ‘ಮಾಂಜಾ’ದ ಮೇಲೆ ರಾಷ್ಟ್ರಾದ್ಯಂತ ನಿಷೇಧವನ್ನು ಹೇರಿ ಬುಧವಾರ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಗಾಜು ಮತ್ತು ಲೋಹದ ಹುಡಿಯನ್ನು ಲೇಪಿಸಲಾಗುವ ಈ ಮಾಂಜಾ ಮನುಷ್ಯರು,ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಅಪಾಯವನ್ನುಂಟು ಮಾಡುವ ಮತ್ತು ಪರಿಸರಕ್ಕೆ ಬೆದರಿಕೆಯೊಡ್ಡುವ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
ಮಾಂಜಾದ ಅಪಾಯಕಾರಿ ಪರಿಣಾಮಗಳ ಬಗ್ಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ವರದಿಯೊಂದನ್ನು ಸಲ್ಲಿಸುವಂತೆ ಎನ್‌ಜಿಟಿ ಅಧ್ಯಕ್ಷ ನ್ಯಾ.ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ಮಾಂಜಾ ಅಸೋಸಿಯೇಷನ್ ಆಫ್ ಇಂಡಿಯಾಕ್ಕೆ ನಿರ್ದೇಶ ನೀಡಿದೆ.
ಮಕರ ಸಂಕ್ರಾಂತಿ ಹಬ್ಬವು ಸಮೀಪಿಸುತ್ತಿದೆ ಮತ್ತು ಆ ಸಂದರ್ಭದಲ್ಲಿ ಗಾಳಿಪಟಗಳನ್ನು ಹಾರಿಸಲು ಮಾಂಜಾವನ್ನು ಬಳಸಲಾಗುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಅರ್ಜಿದಾರ ಪೆಟಾ ಸಂಸ್ಥೆ ಪರ ವಕೀಲರು ಅದನ್ನು ನಿಷೇಧಿಸುವಂತೆ ಕೋರಿದ್ದರು.
Next Story





