ಮಿಸ್ ಸುಪ್ರಾ ನ್ಯಾಶನಲ್ ಪ್ರಶಸ್ತಿ ವಿಜೇತ ಶ್ರೀನಿಧಿ ಆರ್.ಶೆಟ್ಟಿಗೆ ಮಂಗಳೂರಿನಲ್ಲಿ ಸನ್ಮಾನ

ಮಂಗಳೂರು,ಡಿ.12;ಪೊಲೇಂಡ್‌ನಲ್ಲಿ ಡಿಸೆಂಬರ್‌ನಲ್ಲಿ ನಡೆದ ಮಿಸ್ ಸುಪ್ರಾ ನ್ಯಾಶನಲ್-2016 ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದ ಮಂಗಳೂರಿನ ಶ್ರೀನಿಧಿ ಅವರನ್ನು ಇಂಟರ್ ನ್ಯಾಶನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ ವತಿಯಿಂದ ಇಂದು ನಗರದ ಎಸ್‌ಡಿಎಂ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಇಂಟರ್ ನ್ಯಾಶನಲ್ ವೆಲ್‌ಫೇರ್ ಟ್ರಸ್ಟ್‌ನ ಸ್ಥಾಪಕರಾದ ಸದಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ,ಮಾಜಿ ಸಚಿವ ಅಮರನಾಥ ಶೆಟ್ಟಿ ,ಮನಪಾ ಮೇಯರ್ ಹರಿನಾಥ್ ಸಂಗೀತಾ ನಿರ್ದೇಶಕ ಗುರುಕಿರಣ್ ,ಜಯಕರ ಶೆಟ್ಟಿ ಇಂದ್ರಾಳಿ,ಚಂದ್ರಹಾಸ ರೈ,ಶ್ರೀನಿಧಿ ಶೆಟ್ಟಿಯವರ ತಂದೆ ಕಾರ್ನಾಡ್ ರಮೇಶ್ ಶೆಟ್ಟಿ,ಮೈನಾ ಶೆಟ್ಟಿ,ಸತೀಶ್ ಶೆಟ್ಟಿ ಪಟ್ಲ,ಮಿಥುನ್ ರೈ,ದೇವಿಚರಣ ಶೆಟ್ಟಿ,ಉದಯ ಕುಮಾರ್ ಶೆಟ್ಟಿ, ಕೃಷ್ಣ ಶೆಟ್ಟಿ,ಅಡ್ಯಾರ್ ಮಾಧವ ಶೆಟ್ಟಿ,ರಾಜ್ ಕುಮಾರ್ ಶೆಟ್ಟಿ,ಜಗದೀಶ್ ಶೆಟ್ಟಿ,ವಿಜಯ ಲಕ್ಷ್ಮೀ ಶೆಟ್ಟಿ,ಸುರೇಂದ್ರ ಶೆಟ್ಟಿ,ರಾಜ್ ಗೋಪಾಲ ರೈ ,ಭಾಸ್ಕರ ರೈ ಕುಕ್ಕವಳ್ಳಿ,ಕದ್ರಿ ನವನೀತ ಶೆಟ್ಟಿ ಮೊದಲಾದವರು ಉಪಸ್ಥಿತ ರಿದ್ದರು.
‘ನನ್ನ ಪ್ರಶಸ್ತಿ ಈ ದೇಶದ ಜನತೆಗೆ ಸಂದ ಗೌರವ’ : ನನಗೆ ಬಂದಿರುವ ಪ್ರಶಸ್ತಿ ಈ ದೇಶದ ಕೋಟ್ಯಾಂತರ ಮಂದಿ ಭಾರತೀಯರ,ಹಿರಿಯರ ,ಹೆತ್ತವರ ಆಶೀರ್ವಾದದ ಫಲ ಎಂದು ಭಾವಿಸುತ್ತೇನೆ.ನನ್ನ ತಾಯಿ ನಾನು ಹತ್ತನೆ ತರಗತಿ ಓದುತ್ತಿರುವಾಗ ಇರುವಾಗ ನಿಧನರಾದರು .ನನ್ನ ತಂದೆ ನನ್ನನ್ನು ಹಾಗೂ ನನ್ನ ಇಬ್ಬರು ಸಹೋದರಿಯರನ್ನು ಏನೂ ಕೊರತೆಯಾಗದಂತೆ ಬೆಳೆಸಿದರು.ಈ ಸಾಧನೆಗೆ ಅವರ ಪ್ರೋತ್ಸಾಹ ಕಾರಣ.ನನ್ನ ಸಹೋದರಿಯರು ನನಗೆ ಎರಡು ಕಣ್ಣುಗಳಂತೆ ಮಾರ್ಗದರ್ಶನ ನೀಡಿದ್ದಾರೆ.ನನ್ನನ್ನು ಪೊಲೇಂಡಿನಿಂದ ಊರಿಗೆ ಬಂದಾಗ ಈ ರೀತಿ ಗೌರವಿಸಿ ರಾಣಿಯಂತೆ ನೋಡಿಕೊಂಡ ಸಮುದಾಯದ ಎಲ್ಲರಿಗೂ ನನ್ನ ಮನದಾಳದ ಕೃತಜ್ಞತೆಗಳು ಎಂದು ಶ್ರೀನಿಧಿ ಶೆಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.







