ಮಾಸ್ಟರ್ ಅಥ್ಲೆಟಿಕ್‌ನಲ್ಲಿ ಚಿನ್ನದ ಪದಕ

ಉಡುಪಿ, ಡಿ.14: ಉಡುಪಿಯ ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ಟೆಕ್ನಲಾಜಿಸ್ಟ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಎಚ್.ಉದಯಕುಮಾರ ಶೆಟ್ಟಿ ಇತ್ತೀಚೆಗೆ ಬೆಂಗಳೂರಿನ ವಿದ್ಯಾನಗರದಲ್ಲ್ಲಿ ನಡೆದ 37ನೇ ರಾಜ್ಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ 50+ ವಿಭಾಗದ 800ಮೀ., 1500ಮೀ. ಸ್ಪರ್ಧೆಯಲ್ಲಿ ಚಿನ್ನ ಹಾಗೂ 400ಮೀ.ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈ ಮೂರು ವಿಭಾಗಳಲ್ಲಿ ಮುಂದಿನ ಫೆ.21ರಿಂದ ಹೈದರಾಬಾದ್‌ನಲ್ಲಿ ನಡೆಯುವ 37ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಇವರು ಆಯ್ಕೆಯಾಗಿದ್ದಾರೆ.
Next Story





