ಸಚಿವೆ ಉಮಾಶ್ರೀ ಡಿ.15ರಂದು ಉಡುಪಿಗೆ

ಉಡುಪಿ, ಡಿ.14: ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ಡಿ.15ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಅಪರಾಹ್ನ 2:30ಕ್ಕೆ ಬೈಂದೂರು ಯಡ್ತರೆ ಯ ಜೆ.ಎನ್.ಆರ್ ಕಲಾಮಂದಿರದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ, ಸಂಜೆ 5:00ಕ್ಕೆ ಬೈಂದೂರು ಶಾರದಾ ವೇದಿಕೆಯಲ್ಲಿ ರಂಗಸುರಭಿ- 2016 ನಾಟಕ ಸಪ್ತಾಹದಲ್ಲಿ ಭಾಗವಹಿಸಿ ಸುರಭಿ ಕಲಾಗ್ರಾಮಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಬಳಿಕ ರಾತ್ರಿ 10:15ಕ್ಕೆ ಕುಂದಾಪುರದಿಂದ ಬಾಗಲಕೋಟೆಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.
Next Story





