ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಕಸ್ಟಡಿ ವಿಸ್ತರಣೆ
.jpg)
ಉಡುಪಿ, ಡಿ. 14: ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ ಮತ್ತು ನಿರಂಜನ ಭಟ್ ಅವರ ನ್ಯಾಯಾಂಗ ಬಂಧನವನ್ನು ಉಡುಪಿಯ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಧೀಶ ಕೆ. ರಾಜೇಶ್ ಕರ್ಣಂ ಅವರು ಡಿ. 27ರವರೆಗೆ ವಿಸ್ತರಣೆ ಮಾಡಿ ಬುಧವಾರ ಆದೇಶಿಸಿದ್ದಾರೆ.
ಷರತ್ತುಬದ್ಧ ಜಾಮೀನಿನ ಮೇಲಿರುವ ಸಾಕ್ಷನಾಶದ ಇಬ್ಬರು ಆರೋಪಿಗಳು ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ರಾಜೇಶ್ವರಿ ಅವರ ಜಾಮೀನು ಅರ್ಜಿ ವಿಚಾರಣೆಯು ಡಿ.16ಕ್ಕೆ ಮುಂದೂಡಿಕೆಯಾಗಿದೆ.
Next Story





