ಮೊಂಟೆಪದವು: ಖುವತ್ತುಲ್ ಇಸ್ಲಾಂ ವತಿಯಿಂದ ಸನ್ಮಾನ

ಕೊಣಾಜೆ,ಡಿ.14: ಮದ್ರಸ ಪರೀಕ್ಷೆಯಲ್ಲಿ ಏಳನೇ ತರಗತಿಯಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನಗಳಿಸಿದ ಮೊಂಟೆಪದವು ಅಲ್ ಮದರಸುತ್ತಲ್ ಬದ್ರಿಯಾ ವಿದ್ಯಾರ್ಥಿ ಮಹಮ್ಮದ್ ರಾಝಿ ಹಾಗೂ ಇವರ ವಿದ್ಯಾಭ್ಯಾಸ ಕಲಿಸಿ ಉತ್ತೇಜಿಸಿದ ಅಬ್ದುಲ್ ಹಮೀದ್ ಮದನಿ ಅವರನ್ನು ಮೊಂಟೆಪದವಿನ ಖುವತ್ತುಲ್ ಇಸ್ಲಾಂ ಮೊಂಟೆಪದವು ಇದರ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿಯ ಖತೀಬರಾದ ಸಿದ್ದೀಕ್ ಸಹದಿ, ಅಬುಬಕ್ಕರ್ ಸಿದ್ದಿಕ್, ಶಾಫಿ ಮದನಿ ಬದ್ರಿಯಾ, ಜುಮ್ಮಾ ಮಸೀದಿಯ ಅಧ್ಯಕ್ಷರು ಮತ್ತು ಖುವತ್ತುಲ್ ಇಸ್ಲಾಂ ಇದರ ಗೌರವಾಧ್ಯಕ್ಷರಾದ ಜಿ.ಎಂ.ಹಸನ್ ಕುಂಞಿ, ಬದ್ರಿಯಾ ಜುಮ್ಮಾ ಮಸೀದಿ ಕಾರ್ಯದರ್ಶಿ ಅಬ್ದುಲ್ ಖಾದರ್, ಖುವತ್ತುಲ್ ಇಸ್ಲಾಂ ಅಧ್ಯಕ್ಷ ಯು.ಟಿ.ಸಂಶುದ್ದೀನ್, ಕಾರ್ಯದರ್ಶಿ ಎ.ಎಂ.ಜಮೀಲ್ ಮತ್ತು ಖುವತ್ತುಲ್ ಇಸ್ಲಾಂನ ಸದಸ್ಯರು ಉಪಸ್ಥಿತರಿದ್ದರು.
Next Story





