ಮತ್ತೆ ಆಸ್ಕರ್ ರೇಸಿನಲ್ಲಿ ಎ. ಆರ್. ರಹ್ಮಾನ್

ಹೊಸದಿಲ್ಲಿ,ಡಿ.14: ಸಂಗೀತ ನಿರ್ದೇಶಕ ಎ.ಆರ್.ರಹ್ಮಾನ್ ಅವರು 'ಪೀಲೆ:ಬರ್ಥ್ ಆಫ್ ಎ ಲೆಜೆಂಡ್ 'ಚಿತ್ರಕ್ಕಾಗಿ ಅತ್ಯುತ್ತಮ ಮೂಲ ಸಂಗೀತ ವಿಭಾಗದಲ್ಲಿ ನಾಮಕರಣಗೊಳ್ಳುವ ಮೂಲಕ ಭಾರತ ಮತ್ತೊಮ್ಮೆ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡಿದ್ದಾರೆ. ಈ ಬಾರಿ ಈ ವಿಭಾಗದಲ್ಲಿ ಅವರು 145 ಜನರೊಂದಿಗೆ ಪೈಪೋಟಿಯಲ್ಲಿದ್ದಾರೆ.
ಇದೇ ಚಿತ್ರದ ಜಿಂಗಾ ಹಾಡು ಇತರ 91 ಹಾಡುಗಳೊಂದಿಗೆ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ನಾಮಕರಣಗೊಂಡಿದೆ. ರಹ್ಮಾನ್ 2009ರಲ್ಲಿ ಹಿಟ್ ಚಿತ್ರ 'ಸ್ಲಮ್‌ಡಾಗ್ ಮಿಲಿಯನೇರ್'ಗಾಗಿ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅತ್ಯುತ್ತಮ ಮೂಲ ಸಂಗೀತ ಮತ್ತು ಅತ್ಯುತ್ತಮ ಮೂಲ ಗೀತೆ(ಜೈ ಹೋ) ಗಾಗಿ ಅವರಿಗೆ ಈ ಪ್ರಶಸ್ತಿಗಳು ಒಲಿದು ಬಂದಿದ್ದವು.
89ನೇ ಆಸ್ಕರ್ ಪ್ರಶಸ್ತಿಗಳಿಗಾಗಿ ಅಂತಿಮ ನಾಮಿನೇಷನ್‌ಗಳು 2017,ಜ.24ರಂದು ಪ್ರಕಟವಾಗಲಿವೆ. 2017,ಫೆ.26ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
Next Story





