ವಿಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಲು ಕಟ್ಟುನಿಟ್ಟಿನ ಕ್ರಮ : ಜಯಂತಿ ಬಲ್ನಾಡು

ಪುತ್ತೂರು,ಡಿ.14 : ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನಗರಸಭಾ ವ್ಯಾಪ್ತಿಯ ಎಲ್ಲಾ ವಾರ್ಡುಗಳ ರಸ್ತೆಗಳನ್ನು ಆದ್ಯತೆ ಮೇರೆಗೆ ಅಭಿವೃದ್ಧಿ ಪಡಿಸಲು ಈಗಾಗಲೇ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ನೀಡಲಾಗಿದೆ ಎಂದು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಹೇಳಿದರು.
ಪುತ್ತೂರು ನಗರಸಭೆಯ 15ನೇ ವಾರ್ಡಿನ ಉರ್ಲಾಂಡಿಯಲ್ಲಿ ಬುಧವಾರ ಅವರು ಕಿರು ರಸ್ತೆಯ ಕಾಂಕ್ರೀಟೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಪ್ರೊ.ಬಿ.ಜೆ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಉಪಾಧ್ಯಕ್ಷ ಬಿ.ವಿಶ್ವನಾಥ ಗೌಡ, ನಗರಸಭಾ ಸದಸ್ಯರಾದ ರಾಜೇಶ್ ಬನ್ನೂರು, ಎಚ್.ಮಹಮ್ಮದ್ ಆಲಿ, ಶಕ್ತಿಸಿನ್ಹ, ಈ ರಸ್ತೆಗೆ ಸ್ಥಳ ದಾನ ಮಾಡಿರುವ ರಾಜೀವಿ ವಿದ್ವಾನ್, ಈ ಹಿಂದೆ ಕಚ್ಛಾ ರಸ್ತೆ ನಿರ್ಮಿಸಿರುವ ಎ.ಜೆ ನಾಕ್, ಉಮೇಶ್ ಹೆಗ್ಡೆ, ಸ್ವರ್ಣಲತಾ ಹೆಗ್ಡೆ, ಯಶೋಧ, ಅನಿಲ್ ಕುಮಾರ್ ಉರ್ಲಾಂಡಿ, ಜಯಶ್ರೀ, ಗುತ್ತಿಗೆದಾರರಾದ ಹಂಝ ಮತ್ತಿತರರು ಉಪಸ್ಥಿತರಿದ್ದರು.





