ಇರಾ: ನಿವೇಶನ ರಹಿತರ ಗ್ರಾಮಸಭೆ

ಕೊಣಾಜೆ,ಡಿ.14: ಇರಾ ಗ್ರಾಮ ಪಂಚಾಯಿತಿ ವತಿಯಿಂದ ನಿವೇಶನ ರಹಿತ ಗ್ರಾಮ ಸಭೆಯು ಇರಾ ಮಲಯಾಳಿ ಬಿಲ್ಲವ ಸಾ ಭವನದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಇರಾ ಗ್ರಾಮದ ಕಂಡದಟ್ಟು ಎಂಬಲ್ಲಿ ಗ್ರಾಮದ ನಿವೇಶನ ರಹಿತ ಬಡವರಿಗಾಗಿ ಸುಮಾರು ಹನ್ನೆರಡು ಎಕರೆ ಜಮೀನನ್ನು ಈಗಾಗಲೇ ಕಾದಿರಿಸಿದ್ದು ಇದನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ವಿತರಿಸುವ ಪ್ರಕ್ರಿಯೆ ನಡೆಯಲಿದ್ದು ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಸಂದರ್ಭದಲ್ಲಿ ವಿನಂತಿಸಿದರು.
ಗ್ರಾಮ ಕರಣಿಕಾದ ಎ.ಪಿ ಭಟ್ ಗ್ರಾಮ ಪಂಚಾಯಿತಿ ಸದಸ್ಯರುಗಳು ಉಪಸ್ತಿತರಿದ್ದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪ್ರಕಾಶ್ ಯಸ್ ಸ್ವಾಗತಿಸಿ, ಪಂಚಾಯಿತಿ ಸಿಬ್ಬಂದಿ ಗುಲಾಬಿ ವಂದಿಸಿದರು.
Next Story





