1.20 ಲಕ್ಷ ರೂ. ವೌಲ್ಯದ ಸರಗಳ್ಳತನ
ದಾವಣಗೆರೆ, ಡಿ.14: ನಗರದಲ್ಲಿ ಮತ್ತೆ ಸರಗಳ್ಳರ ಕೈ ಚಳಕ ಮುಂದುವರಿದಿದ್ದು, ನಗರದ ಎಲ್‌ಐಸಿ ಕಾಲನಿಯಲ್ಲಿ ಹಾಲು ತರಲು ಅಂಗಡಿಗೆ ಹೋಗುತ್ತಿದ್ದ ಗೃಹಿಣಿಯ ಕೊರಳಲಿದ್ದ ಮಾಂಗಲ್ಯ ಸರವನ್ನು ಹಾಡಹಗಲೇ ಕಳ್ಳರು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಭಾಗ್ಯಲಕ್ಷ್ಮೀ ಎಂಬ ಮಹಿಳೆ ಎಂದಿನಂತೆ ತಮ್ಮ ಮನೆಯಿಂದ ಹತ್ತಿರವಿರುವ ಕಿರಾಣಿ ಅಂಗಡಿಗೆ ಹಾಲು ತರಲು ಹೋಗುತ್ತಿದ್ದ ವೇಳೆ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಬಂದ ಸರಗಳ್ಳರು ಭಾಗ್ಯಲಕ್ಷ್ಮೀ ಅವರ ಕೊರಳಿಗೆ ಕೈ ಹಾಕಿ ಸುಮಾರು 1.20 ಲಕ್ಷ ರೂ. ವೌಲ್ಯದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಈ ಪ್ರಕರಣದ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ
Next Story





