ಆಯತಪ್ಪಿಸಮುದ್ರಕ್ಕೆ ಬಿದ್ದು ಮೀನುಗಾರ ಸಾವು
ಅಂಕೋಲಾ, ಡಿ..14: ತಾಲೂಕಿನ ಬೇಲೆಕೇರಿಯಲ್ಲಿ ಮೀನುಗಾರನೋರ್ವ ಆಯತಪ್ಪಿಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.
ಅದೇ ಗ್ರಾಮದ ಗೌರೀಶ ಬಾಲಕೃಷ್ಣ ಕಲ್ಗುಟ್ಕರ (20) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಈತನು ಬೇಲೆಕೇರಿಯ ಶಾಂತಿ ಮಾಧವ ಬೋಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಬೋಟ್‌ನಿಂದ ಆಯತಪ್ಪಿಸಮುದ್ರಕ್ಕೆ ಬಿದ್ದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





