ಅಪೂರ್ವಗೆ ಚಿನ್ನದ ಪದಕ

ಮಡಿಕೇರಿ, ಡಿ.14: ಸ್ನಾತಕೋತ್ತರ ಎಂಎಸ್‌ಡಬ್ಲ್ಯು ಪದವಿಯಲ್ಲಿ ಮಡಿಕೇರಿಯ ಎಂ.ಎಸ್. ಅಪೂರ್ವ ಚಿನ್ನದ ಪದಕ ಗಳಿಸಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 97 ನೆ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲ ವಜುಭಾಯಿವಾಲ ಅವರ ಸಮ್ಮುಖದಲ್ಲಿ ಅಪೂರ್ವ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇವರಿಗೆ ಎರಡು ಚಿನ್ನದ ಪದಕ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಶೈಕ್ಷಣಿಕ ಸಾಧನೆ ಮಾಡಿರುವ ಎಂ.ಎಸ್. ಅಪೂರ್ವ ನಗರದ ಅಶೋಕ ಪುರದ ನಿವಾಸಿ ದಿ.ಸುರೇಶ್ ಹಾಗೂ ಪಿ.ಎಫ್ ಇಲಾಖೆ ನೌಕರರಾಗಿರುವ ಭವಾನಿ ದಂಪತಿ ಪುತ್ರಿಯಾಗಿದ್ದಾರೆ.
Next Story





