ಏಷ್ಯಾಕಪ್ ಹಾಕಿ
ಲೀಲಾವತಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ

ಮಡಿಕೇರಿ, ಡಿ.14: ಭಾರತೀಯ ಕ್ರೀಡಾ ಪ್ರಾಧಿಕಾರದ ಮಡಿಕೇರಿ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಲೀಲಾವತಿ ಎಂ.ಜೆ. ಅವರು 18 ವರ್ಷದೊಳಗಿನ ಏಷ್ಯಾಕಪ್ ಹಾಕಿ ಪಂದ್ಯಾವಳಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹಿರಿಮೆಗೆ ಗರಿ ಮೂಡಿಸಿದ್ದಾರೆ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಇದೇ ಡಿ.16ರಿಂದ 22 ರವರೆಗೆ ನಡೆಯಲಿರುವ ಏಷ್ಯಾಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಭಾರತದ ಹದಿನೆಂಟು ವರ್ಷದೊಳಗಿನ ಹಾಕಿ ತಂಡದಲ್ಲಿ ಲೀಲಾವತಿ ಎಂ.ಜೆ. ಸ್ಥಾನ ಪಡೆದಿದ್ದು, ಉತ್ತಮ ಹಾಕಿ ಆಟದ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ. ಮಡಿಕೆೇರಿಯ ಸಾಯಿ ಕ್ರೀಡಾ ತರಬೇತಿ ಕೇಂದ್ರಕ್ಕೆ 2012 ರ ಏಪ್ರಿಲ್ 30 ರಂದು ಸೇರ್ಪಡೆಗೊಂಡ ಲೀಲಾವತಿ ಅವರು ತಮ್ಮ ಪ್ರತಿಭೆಯ ಮೂಲಕ ಸಬ್ ಜೂನಿಯರ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಹಾಕಿ ತಂಡವನ್ನು ಪ್ರತಿನಿಧಿಸಿದ್ದಾರೆ.
ಪ್ರಸಕ್ತ ಸಾಲಿನ ಮೇ.20ರಂದು ಕಿರಿಯರ ವಿಭಾಗದ ಹಾಕಿ ಕ್ಯಾಂಪ್‌ಗೆ ಇವರು ಆಯ್ಕೆಯಾಗಿದ್ದುದು ವಿಶೇಷ.
Next Story





