ಸಚಿವರ ರಾಸಲೀಲೆ ಪ್ರಕರಣ ಮೇಟಿ ಉಚ್ಚಾಟನೆಗೆ ವಿಶ್ವನಾಥ್ ಒತ್ತಾಯ

ಮೈಸೂರು, ಡಿ.14: ರಾಸಲೀಲೆ ಪ್ರಕರ ಣದ ಆರೋಪ ಎದುರಿಸು ತ್ತಿರುವ ಅಬಕಾರಿ ಸಚಿವ ಎಚ್.ವೈ. ಮೇಟಿ ನೀಡಿರುವ ರಾಜೀನಾಮೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ರಾಜ್ಯಪಾಲರ ಗಮನಕ್ಕೆ ತಂದು ಅಂಗೀಕರಿ ಸುವಂತೆ ಶಿಾರಸು ಮಾಡಿ, ಪಕ್ಷದಿಂದಲೇ ಉಚ್ಚಾಟನೆ ಮಾಡಬೇಕು ಎಂದು ಮಾಜಿ ಸಂಸದ ಅಡಗೂರು ಎಚ್.ವಿಶ್ವನಾಥ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಮೇಟಿ ಅಂತಹವರನ್ನು ಪಕ್ಷದಲ್ಲಿ ಜಾಸ್ತಿ ಸಮಯ ಇಟ್ಟುಕೊಂಡರೆ ಪಕ್ಷದ ಬಗ್ಗೆ ಜನತೆ ಹೊಂದಿರುವ ವಿಶ್ವಾಸಾರ್ಹತೆಗೆ ಧಕ್ಕೆ ಬರಲಿದೆ. ಹಾಗಾಗಿ ಅಬಕಾರಿ ಸಚಿವರಿಂದ ಕೇವಲ ರಾಜೀನಾಮೆ ಪಡೆಯುವುದಲ್ಲದೆ, ಪಕ್ಷದಿಂದಲೇ ಉಚ್ಚಾಟಿಸಬೇಕು ಎಂದರು.
ಕಾಂಗ್ರೆಸ್‌ಗೆ ದೊಡ್ಡ ಇತಿಹಾಸವಿದೆ. ಆ ಪಕ್ಷದಲ್ಲಿರುವವರು ಬಹಳ ಎಚ್ಚರಿಕೆಯಿಂದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಇಂತಹ ಗಂಭೀರ ಆರೋಪ ಬಂದ ಕೂಡಲೆ ಪಕ್ಷದ ಪ್ರಮುಖರು ಕ್ರಮ ಜರಗಿಸಬೇಕಿತ್ತು, ಪಕ್ಷದ ನಾಯಕರ ಇಂತಹ ವಿಳಂಬ ಧೋರಣೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಬೇಸರ ವ್ಯಕ್ತಪಡಿಸಿದರು.





